ಆಗುವುದೆಲ್ಲಾ ಒಳ್ಳೆದಕ್ಕೆ

ಇದು ನನ್ನ ಅಮ್ಮ ನನಗೆ ಚಿಕ್ಕವನಿದ್ದಾಗ ಹೇಳಿರೋ ಕತೆ, ನನಗೆ ಬೇಜಾರಾದಾಗೆಲ್ಲ ಈ ಕಥೆನಾ ನೆನೆಪು ಮಾಡಿಕೊಂಡು ಮೂಡ್ change ಮಾಡ್ಕೋತೀನಿ, ಒಂದು ರಾಜ್ಯ ಅಂಚಿನಲ್ಲಿ ಇರೋ ಊರ ಜನರು ರಾಜನ ಹತ್ರ ಬಂದು ತಮಗೆ ಕಾಡು ಪ್ರಾಣಿಗಳಿಂದ ತುಂಬ ತೊಂದರೆ ಆಗುತ್ತಿದೆ ಕಾಡಲ್ಲಿ ಪ್ರಾಣಿಗಳು ಜಾಸ್ತಿ ಆಗಿವೆ ಅದಕ್ಕೆ ಏನಾದ್ರೂ ಪರಿಹಾರ ಕೊಡಿ ಅಂತ ಕೇಳ್ತಾರೆ, ರಾಜನು ಮಂತ್ರಿ ಸಲಹೆ ಕೇಳುತ್ತಾನೆ, ಮಂತ್ರಿ ಯಾವಾಗಲೂ ಎಲ್ಲದಕ್ಕೂ ಒಳ್ಳೇದು ಆಗತ್ತೆ ಅಂತ ಹೇಳ್ತಾ ಇರುತ್ತಾನೆ ಈಗಲೂ ಹಾಗೆ ಹೇಳುತ್ತಾನೆ ಅದಕ್ಕೆ ರಾಜ ಮಂತ್ರಿನಾ ಉಗಿತಾನೆ ಏನು ಒಳ್ಳೇದು ಆಗತ್ತೆ ಅಂತ, ಮಂತ್ರಿ ಬೇಟೆ ಹೋಗಿ ಸ್ವಲ್ಪ ಪ್ರಾಣಿಗಳನ್ನು ಕೊಂದರೆ ಒಳ್ಳೇದು ಆಗತ್ತೆ ಅಂತಾನೆ, ಅದಕ್ಕೆ ರಾಜ ಬೇಟೆಗೆ ಹೋಗಲು ಸಿದ್ಧವಾಗುತ್ತಾನೆ. ಮರುದಿನ ಬೇಟೆಗೆ ಹೋಗಲು ತಯಾರಿ ಮಾಡುತ್ತಾರೆ ಅಂದ್ರೆ ಸೈನಿಕರು ರಾಜ ಮಂತ್ರಿ ಎಲ್ಲರೂ ಪೂಜೆ ಮಾಡಿ ಬೇಟೆಗೆ ಹೊರಡುತ್ತಾರೆ, ಸುರವಾತಿನಲ್ಲಿ ಪ್ರಾಣಿಗಳು ಸಿಗುವುದಿಲ್ಲ, ಅದಕ್ಕೆ ದಟ್ಟ ಕಾಡಿನ ಒಳಗೆ ಹೋಗತ್ತಾರೆ .ರಾಜ ಮತ್ತು ಮಂತ್ರಿ ಬೇಟೆ ಆಡು ಬರದಲ್ಲಿ ಸೈನಿಕರನ್ನೂ ಹಿಂದೆ ಬಿಟ್ಟು ಮುಂದೆ ಹೋಗುತ್ತಾರೆ. ಹಾಗೆ ಬೇಟೆಯನ್ನು ಬೆನ್ನತ್ತಿ ಹೋಗುವಾಗ ನೆಲದ ಮೇಲೆ ಇರೋ ಮರದ ಬೇರಿಗೆ ರಾಜ ಎಡೆದು ಬೀಳುತ್ತಾನೆ ಹಾಗೆ ಹೆಬ್ಬೆರಳಿಗೆ ಗಾಯ ಮಾಡಿಕೊಳ್ಳುತ್ತಾನೆ. ಇದನ್ನ ನೋಡಿ ಅವನ ಹಿಂದೆ ಮಂತ್ರಿ ಅವನ ಯಾವಾಗಲೂ ಹೇಳೋ ಆಗೋದೆಲ್ಲ ಒಳ್ಳೆಯದಕ್ಕೂ ಅಂತ ಹೇಳ್ತಾನೆ. ಮಂತ್ರಿ ಮಾತನ್ನ ಕೇಳಿ ರಾಜನಿಗೆ ಮಂತ್ರಿಯನ್ನು ಖಡ್ಗದಿಂದ ಸೀಳಿ ಹಾಕುವಷ್ಟು ಸಿಟ್ಟು ಬರತ್ತೆ ಆದ್ರೂ ತನ್ನ ಸಿಟ್ಟನ್ನು ತಡೆದು ಮಂತ್ರಿಯನ್ನು ಕೇಳುತ್ತಾನೆ ‘ನಾನು ಬಿದ್ರು ಹೇಗೆ ಒಳ್ಳೇದು ಆಗತ್ತೆ ಅಂತ ಮಂತ್ರಿಯನ್ನು ಕೇಳುತ್ತಾನೆ’ ಅದಕ್ಕೆ ಮಂತ್ರಿ ಆಗೋದೆಲ್ಲ ಒಳ್ಳೆದಕ್ಕೆ ಅಂತ ಹೇಳ್ತಾನೆ ಹೊರೆತು ರಾಜನಿಗೆ ಸರಿಯದ ಉತ್ತರ ಕೊಡುವುದಿಲ್ಲ. ರಾಜನು ಮನಸಲ್ಲೇ ಇವನಿಗೆ ಸರಿಯಾದ ಬುದ್ಧಿ ಕಲಿಸಬೇಕು ಮನಸ್ಸೊಳಗೆ ಅಂದುಕೊಳ್ಳುತ್ತಿರುತ್ತಾನೆ. ಹಾಗೆ ಸ್ವಲ್ಪ ಹೊತ್ತು ಮುಂದೆ ಸಾಗುತ್ತಿದ್ದಾಗ ರಾಜನಿಗೆ ಒಂದು ಹಾಳು ಬಾವಿ ಕಾಣಿಸತ್ತೆ. ರಾಜ ‘ ಮಂತ್ರಿಗಳೇ ನೀವು ರಾಜನ ಎಲ್ಲ ಮಾತುಗಳನ್ನು ಪಾಲಿಸುವುದು ನಿಮ್ಮ ಕರ್ತವ್ಯ ಅಲ್ಲವೇ ಅಂತ ಕೇಳುತ್ತಾನೆ ‘ ಅದಕ್ಕೆ ಮಂತ್ರಿ ಹೌದು ರಾಜರೆ ಹೇಳಿ ನಿಮ್ಮ ಆದೇಶ ಏನು ಕೇಳುತ್ತಾನೆ. ಅದಕ್ಕೆ ರಾಜ ಮುಂದೆ ಇರೋ ಹಾಳು ಬಾವಿಯಲ್ಲಿ ಬೀಳಲೂ ಹೇಳುತ್ತಾನೆ ಒಂದು ವೇಳೆ ರಾಜ ಧರ್ಮ ಪಾಲನೆ ಮಾಡದೆ ಇದ್ರೆ ನಿಮ್ಮನ್ನು ಖಡ್ಗದಿಂದ ಸೀಳುವೆ ಅಂತ ಎಚ್ಚರಿಕೆ ಕೊಡುತ್ತಾನೆ. ಅದಕ್ಕೆ ಮಂತ್ರಿ ” ಆಗೋದೆಲ್ಲ ಒಳ್ಳೇದಕ್ಕೆ” ಅಂತ ಆ ಬಾವಿಯಲ್ಲಿ ಜಿಗಿಯುತ್ತಾನೆ. ರಾಜ ಬಾವಿಯಲ್ಲಿ ಇರೋ ಮಂತ್ರಿಯನ್ನು ಕೆಣಕಿ ಆಗೋದೆಲ್ಲ ಒಳ್ಳೇದಕ್ಕೆ ಅಂತ ಹೇಳಿದೆ ಅಲ್ವಾ ಈಗ ಇಲ್ಲೆ ಬಿದ್ದು ಸಾಯಿರಿ ಅಂತ ಹೇಳಿ ಸೈನಿಕರನ್ನೂ ಹುಡುಕಲು ಹೊರಡುತ್ತಾನೆ. ಬಂದ ದಿಕ್ಕಿನ ಕಡೆ ಹೋಗುತ್ತಿರುವಾಗ ಒಮ್ಮೆಲೇ ಅವನ ಮೇಲೆ ಆಕ್ರಮಣ ಆಗತ್ತೆ ಅವನು ಯಾರು ಆಕ್ರಮಣ ಮಾಡಿದರೆ ಅನ್ನೋದನ್ನ ತಿಳಿವ ಮೊದಲೇ ಬಂದಿ ಆಗಿಬಿಡುತ್ತಾನೆ. ಅವನನ್ನು ಮನುಷ್ಯರನ್ನು ತಿನ್ನುವ ನರಭಕ್ಷಕರು ಬಂದಿಸುತ್ತಾರೆ. ರಾಜನಿಗೆ ತನ್ನ ಪರಿಸ್ಥಿತಿ ಅರಿವಾಗುತ್ತದೆ ಒಂದು ವೇಳೆ ಮಂತ್ರಿ ಇದ್ದಿದ್ದರೆ ಸ್ವಲ್ಪ ಹೊತ್ತು ಹೋರಾಟ ಮಾಡಬಹುದಿತ್ತು ಅಂತ ಆದ್ರೆ ಇಷ್ಟು ನರಭಕ್ಷಕರು ಇರುವಾಗ ಎಲ್ಲವ ವ್ಯರ್ಥ ಆಗೋದು ಅಂತ ತಿಳೀತನೆ. ನರಭಕ್ಷಕರು ಅವನನ್ನೂ ಬಲಿ ಕೊಡಲು ತಮ್ಮ ವಾಸ ಸ್ಥಾನಕ್ಕೆ ಕರೆದುಕೊಂಡು ಬರುತ್ತಾರೆ. ತಮ್ಮ ಎಲ್ಲ ಪೂಜೆಗಳನ್ನು ಪೂರ್ತಿ ಮಾಡಿ ಬಲಿಪೀಠದಲ್ಲಿ ಅವನ ತಲೆಯನ್ನು ಇಡುತ್ತಾರೆ, ಬಲಿ ಕೊಡೋ ಕುಡುಕ ತನ್ನ ಕತ್ತಿ ಎತ್ತಿ ಇನ್ನೇನು ತಲೆ ಕಡಿಬೇಕು ಅನ್ನುವಷ್ಟರಲ್ಲಿ ರಾಜನ ಹೆಬ್ಬೆರಳಿಗೆ ಆಗಿರೋ ಗಾಯ ನೋಡುತ್ತಾನೆ, ನೋಡಿ ಸಿಟ್ಟಿಲ್ಲಿ ತನ್ನ ಕತ್ತಿಯನ್ನು ಬಿಸಾಕುತ್ತಾನೆ, ರಾಜನಿಗೂ ಮತ್ತು ಅಲ್ಲಿರುವ ನರಭಕ್ಷಕರಿಗು ಇವನು ಏನು ಮಾಡುತ್ತಿರುವನು ಅನ್ನೋದೆ ಅರ್ಥ ಆಗಲ್ಲ. ಕಟುಕ ಈ ಬಲಿ ಅಪವಿತ್ರವಾಗಿದೆ ಬಲಿ ಕೊಟ್ಟರೆ ದೇವಿ ಸಿಟ್ಟಗುತ್ತಾಳೆ ಅಂತ ರಾಜನ ಹೆಬ್ಬೆರಳಿಗೆ ಆಗಿರೋ ಗಾಯ ತೋರಿಸುತ್ತಾನೆ. ಅದನ್ನ ನೋಡಿ ನರಭಕ್ಷಕರು ತಮ್ಮ ತಮ್ಮಲ್ಲೇ ಒಳ್ಳೆ ಬಲಿ ಕೈತಪ್ಪಿ ಹೋಯಿತು ಅಂತ ಬೇಜಾರು ಮಾಡಿಕೊಂಡು ರಾಜನನ್ನು ಬಿಟ್ಟು ಕಳಿಸುತ್ತಾರೆ. ರಾಜನಿಗೆ ಒಂದು ಕ್ಷಣ ರೋಮಾಂಚನವಾಗುತ್ತದೆ, ಮಂತ್ರಿ ಯಾವಾಗಲೂ ಹೇಳೋ ಮಾತು ನೆನಪಿಗೆ ಬರುತ್ತದೆ ” ಆಗುವುದೆಲ್ಲ ಒಳ್ಳೆದಕ್ಕೆ” . ರಾಜ ತನ್ನ ತಪ್ಪಿನ ಅರಿವಾಗಿ ಮಂತ್ರಿಯನ್ನು ಮೇಲೆ ಎತ್ತಲು ಬಾವಿ ಹತ್ತಿರ ಓಡೋಡಿ ಬರುತ್ತಾನೆ. ಮಂತ್ರಿಗಳೇ ನೀವು ಮಾತು ನಿಜ ಆಗೋದೆಲ್ಲ ಒಳ್ಳೆದಕ್ಕೆ ಅಂತ ರಾಜ ಹೇಳುತ್ತಾನೆ ಅದನ್ನ ಕೇಳಿದ ಮಂತ್ರಿಗೆ ರಾಜ ಮಾತು ಅರ್ಥ ಆಗುವುದಿಲ್ಲ. ರಾಜ ಮಂತ್ರಿಯನ್ನು ಮೇಲೆ ಎತ್ತಲು ಅಲ್ಲಿರೋ ಆಲದ ಮರ ಬೇರುಗಳನ್ನು ಸುರಳಿ ಮಾಡಿ ಪ್ರಯತ್ನ ಪಡುತ್ತಿರುತ್ತಾನೆ ಅಷ್ಟರಲ್ಲೇ ಸೈನಿಕರು ಇವರನ್ನು ಹುಡುಕುತ್ತ ಇವರು ಇರುವಲ್ಲಿಗೆ ಬರುತ್ತಾರೆ. ಸೈನಿಕರು ಸಹಾಯದಿಂದ ಮಂತ್ರಿಯನ್ನು ಮೇಲೆ ಎತ್ತುತ್ತಾರೆ. ರಾಜನು ನಡೆದಿರೋ ಎಲ್ಲ ಘಟನೆಗಳನ್ನು ಬಗ್ಗೆ ಮಂತ್ರಿ ಹೇಳಿ ಮಂತ್ರಿಯನ್ನು ಕಣ್ಣೀರು ಹಾಕುತ್ತಾ ಅಪ್ಪಿಕೊಳ್ಳುತ್ತಾನೆ, ನೀವು ಯಾಕೆ ಯಾವಾಗಲೂ ಆಗೋದೆಲ್ಲ ಒಳ್ಳೆದಕ್ಕೆ ಅಂತ ಹೇಳುತ್ತಿದೀರಿ ಅದರ ಮಹತ್ವ ಏನು ಇವತ್ತು ತಿಳಿಯಿತು ಅನ್ನುತ್ತಾನೆ. ಅವಾಗ ಮಂತ್ರಿಗಳು ರಾಜನ ಕಾಲಿಗೆ ಬಿದ್ದು ರಾಜರೆ ನೀವು ನನ್ನ ಬಾವಿಗೆ ತಳ್ಳಿದ್ದು ಒಳ್ಳೆದಕ್ಕೆ ಅಂತ ಹೇಳುತ್ತಾನೆ. ಅದನ್ನ ಕೇಳಿದ ರಾಜನಿಗೆ ಆಶ್ಚರ್ಯ ಆಗುತ್ತದೆ ಆಗ ಮಂತ್ರಿಗಳು ” ರಾಜರೆ ನೀವು ಒಂದು ವೇಳೆ ನನ್ನನ್ನು ಬಾವಿಗೆ ತಳ್ಳದೆ ಹೋಗಿದ್ದಿದ್ದರೆ ಆ ನರಭಕ್ಷಕರು ಈ ನಿಮ್ಮ ಮಂತ್ರಿಯನ್ನು ಬಲಿ ಕೊಟ್ಟು ಆಹಾರ ಮಾಡಿಕೊಳ್ಳುತ್ತಿದರೆ ಅಂತ ಹೇಳುತ್ತಾನೆ”, ಅದನ್ನ ಕೇಳಿದೆ ರಾಜನಿಗೆ ಮೊದಲು ಶಾಕ್ ಆಗಿ ಆಮೇಲೆ ಸರಿಯಾಗಿ ಅರ್ಥ ಆಗುತ್ತದೆ, ಅವನು ಮಂತ್ರಿಯನ್ನು ಎಬ್ಬಿಸಿ ಅಪ್ಪಿಕೊಳ್ಳುತ್ತ ” ಆಗುವುದೆಲ್ಲ ಒಳ್ಳೆದಕ್ಕೆ” ಹೇಳುತ್ತಾನೆ. ನಮ್ಮ ಜೀವನವೂ ಹೀಗೆ ಅಲ್ಲವೇ ಎಲ್ಲವೂ ಆಗೋದಕ್ಕೆ ಒಂದು ಒಳ್ಳೆ ಕಾರಣ ಇದ್ದೇ ಇರತ್ತೆ. ನಾವು ಆ ಕಾರಣ ಏನು ಅನೋದನ್ನ ತಿಳಿಯೋದನ್ನು ಕಲಿಬೇಕು

ನನ್ನ ಬದುಕಿನ (love) ಸ್ಟೋರಿ

ಎಲ್ಲಿಂದ ಶುರು ಮಾಡಬೇಕು ಇದನ್ನ, ಅವರ ಹೆಸರು Anne Frank, Diana, ಇನ್ನು ಇವೇ ಸದ್ಯಕ್ಕೆ ಇವು ಸಾಕು, ಮೊದಲು ಪ್ರೀತಿ ಅಂದ್ರೆ ಏನು? ನಾವು ಯಾಕೆ ಒಬ್ಬರನ್ನೇ ತುಂಬಾ ತುಂಬಾನೇ ಇಷ್ಟಪಡತೀವಿ? ಅವರ ಜಾಗದಲ್ಲಿ ಇನ್ನೊಬ್ಬರನ್ನ ಕನಸಲ್ಲೂ ಊಹಿಸಲ್ಲ?, ಹೋಗಲಿ ನಾವು ಯಾರನ್ನಾದ್ರೂ ನೋಡಕ್ಕೆ ಚೆನ್ನಾಗಿದಾರೇ ಅಂತ ಇಷ್ಟಪಡಬೇಕಾ? ಹೋಗಲಿ ನಾವು ಇಷ್ಟಪಡೋರು ನಮಗೆ ಸಿಗಲೇಬೇಕು ಅನ್ನೋ rules ಏನಾದ್ರು ಇದಿಯಾ? ಈ ಪ್ರೀತಿ ಅನ್ನೋದು ಒಂದು ತುಂಬಾ ವಿಶೇಷವಾದ ಭಾವನೆ, ಅದು ಶುರುವಾಗಿದ್ದು almost 16 ವರ್ಷಗಳ ಹಿಂದೆ, ಅದು ಒಂದು ಭೇಟಿ ಕೂಡ ಇಲ್ಲದೆ, ಅವರ ಹತ್ತಿರದವರು(ನನಗು ಕೂಡ) ಅವರ ಬಗ್ಗೆ ” ನಿನ್ನ ಹಾಗೆ ಓದುವವರು ಇದಾರೆ ನಮ್ಮ ಮನೇಲಿ ಅಂತ ಹೇಳಿದ್ರು ” ಈ ಒಂದು ಮಾತು ನಮ್ಮನ್ನ ಎಲ್ಲಿವರೆಗೆ ಮುಟ್ಟಿಸಿತು ನೋಡಿ, ಅವರಿಗೆ ಆ ಹೆಸರು ಕೊಟ್ಟಿದ್ದು ಅವರು the diary of young girl by Anne Frank ಬಗ್ಗೆ ಹೇಳಿದ ಎಲ್ಲ ವಿವರಣೆ ನಾನು ಪ್ರೀತಿಯಿಂದ ಕೊಟ್ಟೂರು ಹೆಸರು “Anne Frank”, ಸ್ವಲ್ಪ ದಿನ social media chat ಆದ್ರೆ ನಾವಿಬ್ಬರು ನಮ್ಮಲ್ಲಿ ಇರೋ ಕನಸುಗಳ ಒಬ್ಬರಿಗೊಬ್ಬರು share ಮಾಡ್ತಾ ಇದ್ವಿ, ಅವಳರಿಗೆ writer ಆಗಬೇಕು ಅನ್ನೋ ಕನಸು, ನನಗೆ ಒಂದು startup ಕಟ್ಟಬೇಕು ಅನ್ನೋ ಕನಸು, ಸಮಯ ಕಳೆಯುತ್ತ ಹೋದಂತೆ ಅವರು ತನ್ನ study ನಾನು ನನ್ನ ಕೆಲಸದಲ್ಲಿ ಬ್ಯುಸಿ ಆಗುತ್ತ ಹೋದೆ ಆದ್ರೆ ನನಗೆ ಅವರ ಬಗ್ಗೆ ಇದ್ದ ಸಣ್ಣ ಪ್ರೀತಿಯ ಕಿಡಿಗೆ ಒಬ್ಬರ ತುಪ್ಪ ಸುರಿಯುತ್ತಲೇ ಹೋದರು( ಇದು ಅವರಿಗೆ ಗೊತ್ತೆ ಇರಲಿಲ್ಲ) ಅವರ ಗುಣಗಳ ಬಗ್ಗೆ ಹೇಳುತ್ತಾ. ನನಗೆ ಅವರ ಬಗ್ಗೆ ಇದ್ದ ಪ್ರೀತಿ ಜಾಸ್ತಿ ಆಗುತ್ತಲೇ ಹೋಯಿತು ಯಾಕಂದ್ರೆ ನಾನು ಅವರನ್ನು ಅವರ ಗುಣಗಳಿಂದ ಪ್ರೀತಿಸಲು ಶುರು ಮಾಡಿದ್ದು, ವಿಚಿತ್ರ ಅಂದ್ರೆ almost 9 ವರ್ಷ ನಾನು ಅವರನ್ನು ನೋಡಿಯೇ ಇರಲಿಲ್ಲ, ಅವರ ಗುಣಗಳೆಷ್ಟೇ ಅವಳಾಗಿದ್ದಳು ನನಗೆ, ಆದ್ರೆ ಸಮಯ ಬೇರೇನೇ plan ಮಾಡ್ತಾ ಇತ್ತು, ಅವರು MS ಓದಲು Newzealand ಹೋಗಕ್ಕೆ decide ಮಾಡಿದ್ರು, ನನಗೆ ಅವಾಗ ಭಯ ಶುರುವಾಗಿದ್ದು ನಾನು ಎಲ್ಲಿ ನನ್ನ ಪ್ರೀತಿನ ಅವರಿಗೆ express ಮಾಡದೇ ಹಾಗೆ ಇದ್ದು ಬಿಡ್ತೀನಾ ಅನ್ನೊಅಂತ, ದೇವರೆ ಆ ಒಂದು ತಿಂಗಳು ನನ್ನ ವೇದನೆ ಎಸ್ಟು ಇತ್ತು ಅಂದ್ರೆ ಅದನ್ನ ಎಲ್ಲರೂ ಅನುಭವಿಸಲೇಬೇಕು, ಈಗಲೂ ನೆನಸಿದರೆ ಏನು ಒಂದು ಪುಳಕ, ನಾನು ಅವರಿಗೆ ಪ್ರೊಪೋಸ್ ಮಾಡಬೇಕು ಅಂತ ಒಂದು ಹತ್ತುಸಲಿ call ಮಾಡಕ್ಕೆ try ಮಾಡೋದು call ಕಟ್ಟು ಮಾಡೋದು, ಒಂದು ಸಲಿ ಅಂತು amzon delivery agent ಅಂತ ಸುಳ್ಳು ಹೇಳಿ disconnect ಮಾಡಿದ್ದು, ಅವತ್ತು ರಾತ್ರಿ ಹುಚ್ಚು ಧೈರ್ಯ ಮಾಡಿ ಮಾತಾಡಿದೆ ಅವರ ಹತ್ತಿರ ಅದು ಕೇವಲ 10-20 ಸೆಕೆಂಡ್ಸ್ propose ಮಾಡಲೇ ಇಲ್ಲಾ, ಆದ್ರೆ ಸಾಯೋವರೆಗೆ regret ಅಲ್ಲೇ ಉಳಿಯೋದು ಬೇಡ ಅಂತ ಒಂದು love letter ಬರಿದೆ ( ಅದನ್ನ ಇನ್ನೂ ಒಂದು blog ಅಲ್ಲಿ ಹಾಕ್ತೀನಿ) ಅದಕ್ಕೆ ಅವರು reply ” ನಿಮ್ಮ ಬಗ್ಗೆ ನನಗೆ ಯಾವುದೇ ಆ ತರಹದ ಯಾವುದೇ ಭಾವನೆಗಳು ಇಲ್ಲ, ಇದೆಲ್ಲ ಬಿಟ್ಟು ಚೆನ್ನಾಗಿ ಇರಿ ಅಂತ ಹೇಳಿದ್ರು” ನನಗೆ ಅವರು decision ಬಗ್ಗೆ ಬೇಜಾರು ಏನು ಆಗಲಿಲ್ಲ, ಸಮಯ ಎಸ್ಟು ಚೆನ್ನಾಗಿ ಆಟ ಆಡುತ್ತೆ ನೋಡಿ, ಒಂದು ದಿನ ಅವರ ಜೊತೆಗೆ 45 ನಿಮಿಷ car ಅಲ್ಲಿ ಪ್ರಯಾಣ ಮಾಡಕ್ಕೆ chance ಕೊಟ್ಟಿತು ಆದ್ರೆ ಮಾತಾಡಕ್ಕೆ ಕೊಡಲಿಲ್ಲ ಯಾಕಂದ್ರೆ ಅವರ ಅಮ್ಮನ ಜೊತೆಗೆ ಇದ್ರು, ಆ 45 ನಿಮಿಷ ನನ್ನ ಬದುಕಿನ ಅತಿ ಅಮೂಲ್ಯವಾದ ಸಮಯ ಆಯ್ತು, ಅವತ್ತೇ ಇನ್ನೂ ಒಂದು chance ಸಿಕ್ಕಿತ್ತು ಅವರ ಸ್ವೆಟರ್ ಕದ್ದು ಎತ್ತಿಟ್ಟಿಕೊಳ್ಳಲು ಆದ್ರೆ ನನಗೆ ಧೈರ್ಯ ಬರಲೇ ಇಲ್ಲ, ಒಂದು ವೇಳೆ ಕದ್ದಿದ್ರೆ ಇವತ್ತು ಅವರ ನೆನಪಿಗೆ ಒಂದು ಸ್ವೆಟರ್ ಜೀವನ ಕೊನೆವರೆಗೂ ಉಳಿಯುತ್ತಾ ಇತ್ತು ಈ ಒಂದು regret ಹಾಗೆ ಉಳಿದು ಬಿಟ್ಟಿತು. ಅವರು Newzealand ಹೋದ್ರು, ನಮ್ಮ ಪ್ರೀತಿ eternal (ಶಾಶ್ವತ) ಆಗಿದೆ ಅನ್ನಿಸತ್ತೇ ಯಾಕಂದರೆ ಅವರು ಅಲ್ಲಿಗೆ ಹೋದ್ರು ಅವರು ಗುಣಗಳು ನನ್ನ ಕಿವಿಗೆ ಬೀಳುತ್ತಲೇ ಹೋದವು, ನನಗೆ ಅವರ ಮೇಲೆ ಇರೋ ಪ್ರೀತಿ ಜಾಸ್ತಿಯಾಗುತ್ತಲೇ ಹೋಯ್ತು ಯಾವ level ಅಂದ್ರೆ ಇಲ್ಲಿ ಇರೋ ಆಸ್ತಿ ,ಅಂತಸ್ತು , ಆರಾಮಾಗಿ ಇರೋ ಜೀವನ, ಗೆಳೆಯರ, ನನ್ನ ತುಂಬ ನಂಬಿರೋ ಸಂಬಂಧಗಳನ್ನು, ನನ್ನ ಮನೆಯ ಜವಾಬ್ದಾರಿ ಗಳನ್ನು ಬಿಟ್ಟು ಅಲ್ಲಿಗೆ ಹೋಗಿ ಉಳಿದಿರೋದು ಜೀವನನಾ ಅವರ ಜೊತೆಗೆ ಕೇಳಬೇಕು ಅಂತ decide ಮಾಡಿದೆ, ಆದ್ರೆ ನಾನು ಇಲ್ಲೇ ಮಾಡಿದ್ದೆ ದೊಡ್ಡ mistake ಯಾಕಂದ್ರೆ ನಾನು ಅಂದು ಕೊಂಡ ಸಮಯದಲ್ಲಿ ಅಲ್ಲಿಗೆ ಹೋಗದೆ ಇದ್ರೆ ನಾನು ಅವರನ್ನು ಕಳೆದುಕೊಳ್ಳ ಭಯ ನನ್ನನ್ನು ಯಾವುದೇ plan ಅಥವಾ calculation ಇಲ್ಲದೆ risk ತಗೊ ಹಾಗೆ ಮಾಡಿತು, ಆ risk ನನ್ನ life ಇನ್ನೊಂದು ದಾರಿಗೆ ಕರೆದುಕೊಂಡು ಹೋಗುತ್ತಿವೆ ಅನ್ನೋದೇ ಗೊತ್ತಾಗಲಿಲ್ಲ ಅವಾಗ, ಆದ್ರೆ ನಮ್ಮ ಇಬ್ಬರಲ್ಲಿ ಇನ್ನು ಒಂದು ವಿಚಿತ್ರವಾದ communication ನಡೀತಾ ಇತ್ತು ನಾನು ಅವರ ಬಗ್ಗೆ ವಾಟ್ಸಾಪ್ about ಅಲ್ಲಿ update ಮಾಡ್ತಾ ಇರ್ತಾ ಇದ್ದೆ ಅವರು ಅದಕ್ಕೆ ಅವರೂ Insta ಅಲ್ಲಿ react ಮಾಡ್ತಾ ಇದ್ರು, ಇದು ಎಲ್ಲಿವರೆಗೂ ನಡೀತು ಅಂದ್ರೆ 5 ವರ್ಷ, ನನ್ನ ಅಲ್ಲಿಗೆ ಹೋಗೋ ಪ್ರತಿಯೊಂದು ಪ್ರಯತ್ನ ವಿಫಲ ಆಗುತ್ತಲೇ ಹೋದವು ಆದ್ರೆ ನನ್ನ ಮನಸೂ ಎಸ್ಟು ಬದಲಾಯಿತು ಅಂದ್ರೆ ಅವರು ಇಲ್ಲದೆ ಹೋದ್ರೆ ನನ್ನ ಜೀವನ incomplete ಅನ್ನೋ ನಿರ್ಧಾರ ಮಾಡಿಬಿಟ್ಟೆ, ಆದ್ರೆ ಸಮಯ ಒಂದು ದಿನ ಅವರನ್ನು sudden ಆಗಿ ನನ್ನ ಮುಂದೆ ತಂದು ನಿಲ್ಲಿಸಿತು ಅದು ವರನನ್ನು ಹುಡುಕುತ್ತಿರೋ ವಧುವನ್ನಗಿ, ನನಗೆ ಆ shock ಇಂದ ಹೊರೆಗೆ ಬರಕ್ಕೆ ಒಂದೂವರೆ ವರ್ಷ ಆಯ್ತು, ನಾನು ಅವರಿಗೆ call ಮಾಡಿ convince ಮಾಡೋದಕ್ಕೆ try ಮಾಡಿದೆ, ಅವರಿಂದ ನನಗೆ ಯಾವ ಉತ್ತರನ ಬರಲಿಲ್ಲ, ನನ್ನ ಲೈಫ್ ಅವರ ಲೈಫ್ ಅರ್ಧದಷ್ಟು settle ಆಗಿರಲಿಲ್ಲ ನನ್ನ ಹೇಗೆ ಅವರು depend ಮಾಡಿಕೊಳ್ಳುತ್ತಾರೆ ಅಂತ ಅರ್ಥ ನನಗೆ, ಅವರಿಂದ ನಾನು move on ಆಗಬೇಕು ಅಂತ ಸಿಟ್ಟಿನಿಂದ decide ಮಾಡಿದೆ, ಆದ್ರೆ ತುಂಬ ಕಷ್ಟ ಆಗುತ್ತೇಲೆ ಹೋಯ್ತು move on ಆಗೋದು ಯಾಕಂದ್ರೆ ಇಲ್ಲಿ ನನ್ನ ದ್ವೇಷ ನನ್ನ ಸುಡುತ್ತಲೇ ಇತ್ತು, ನಾನು thread ಬರೆಯಲು ಶುರು ಮಾಡಿದೆ ಅದು ಒಂದು ವರ್ಷದ ಹಿಂದೆ, ಅವರನ್ನು ಮರೆಯಲು ಅಥವಾ ನನಗೆ ಇರೋ ಅವರು ನೆನಪಗಳನ್ನ divert ಮಾಡಲು, ಮನಸೋ ಇಚ್ಛೆ ಏನೇನೂ ಬರಿತ ಇದೆ ಯಾರೆರೊ like ಮಾಡೋರು ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಾ ಇರಲಿಲ್ಲ ಆದ್ರೆ ಒಂದು ದಿನ ಒಬ್ಬರು ನನ್ನ post like ಮಾಡಿದ್ರು, ಅವರು ಮತ್ತೆ ಮತ್ತೆ ನನ್ನ post like ಮಾಡ್ತಾ ಇದ್ರು, ಹಾಗೆ ಅವರು post ಮಾಡ್ತಾ ಇದ್ರು ಬರಿ english ಅಲ್ಲಿ ನನಗೆ ಆವಾಗ್ಲೇ ಗೊತ್ತಾಗಿದ್ದು ಅವರು Anne Frank ಅಂತ, ಅವರ post ಅನ್ನು ನಾನು convert ಮಾಡಿ ನೋಡ್ತಾ ಇದ್ದೆ ಅವೆಲ್ಲ ಪ್ರೀತಿ ಬಗ್ಗೆ ಇದ್ದವು, may be ನನ್ನನ್ನು ನನ್ನ ಆತ್ಮದ ದಾರಿ ಹುಡುಕುಲು ಸಹಾಯ ಮಾಡೋ ಕವಿತೆಗಳು, ನಾನು ಮತ್ತೆ ಅವರಿಗೆ ಇನ್ನೂ ಒಂದು ವರ್ಷ ಸಮಯ ಕೊಡಲು ಕೇಳಿದೆ ಆದ್ರೆ ಅಲ್ಲಿಗೆ ಬಂದು settle ಆಗಲು ಅಲ್ಲ ಒಂದು ಸಲಿಯಾದರು New Zealand ಬಂದು ನನ್ನ ಮನಸ್ಸಿನಲ್ಲಿ ಇರೋದನೆಲ್ಲ ಹೇಳಿ ಒಂದು ದಿನ ಅವರ ಜೊತೆಗೆ ಮನಸೂ ಪೂರ್ತಿಯಾಗಿ ಕಳೆಯಬೇಕು ಅಂತ, ನಾನು New Zealand ಹೋಗಿ settle ಆಗದೆ ಇರೋದಕ್ಕೆ ಇನ್ನೊಂದು ಕಾರಣ ಇದೆ ನನಗೆ ಅವರಲ್ಲಿ ಪ್ರೀತಿ ಹುಟ್ಟಲು ಕಾರಣಿಕರ್ತು ( ಅವಳ ಚಿಕ್ಕಪ್ಪ ಅವರು ) ಆಗಿರೂರ ತುಂಬಾ ಕಷ್ಟದಲ್ಲಿ ಇದಾರೆ, ಒಂದು ವೇಳೆ ನಾನು ಅಲ್ಲಿಗೆ ಹೋದ್ರೆ ಅವರು ಜೀವನ ಏನು ಆಗತ್ತೆ ತಿಳಿಲಿಲ್ಲ, ಅವರು ನನ್ನ ಎಸ್ಟು ನಂಬಿದಾರೆ ಅಂದ್ರೆ ನನ್ನ ಜೊತೆಗೆ ಒಂದು ದಿನ ಮಾತಾಡೆ ಇದ್ರೆ ಅವರು ದಿನ ಪೂರ್ತಿ ಆಗಲ್ಲ, ನನ್ನ thread ಅಲ್ಲಿ ಅವರನ್ನು ರೇಗಿಸಿ ನಗಿಸುವುದು ಅವರು ಅದಕ್ಕೆ ಅವರು ಕವಿತೆ ಬರೆಯೋದು ನಡೀತಾನೆ ಇತ್ತು, ನನಗೆ ಹೇಗೆ ಅನ್ನಿಸಿತ್ತು ಅಂದ್ರೆ ಒಂದು ವರ್ಷದಲ್ಲಿ ನನ್ನ ಎರಡನೆ startup ( first one failed) ಕಟ್ಟಿ ಅವರನ್ನು ವಾಪಸ್ ಇಲ್ಲಿಗೆ ಕರೆದುಕೊಂಡು ಬರಬೇಕು, ಆದ್ರೆ ಸಮಯ ಯಾವಾಗಲೂ ಬೇರೆದನ್ನೇ plan ಮಾಡಿರತ್ತೆ, ಅವರಿಗೆ ಒಳ್ಳೆ ಹುಡುಗನ ಜೊತೆಗೆ engagement ಆಯ್ತು ಇದೆಲ್ಲ ನನಗೆ ಗೊತ್ತಿರಲಿಲ್ಲ ಆದ್ರೆ ಅವರು ಕವಿತೆಗಳಲ್ಲಿ ಹೇಳ್ತಾ ಇದ್ರು ನನಗೆ ಅರ್ಥ ಆಗಲಿಲ್ಲ ಯಾಕಂದ್ರ ನನ್ನ ಗುರಿ ಅವರನ್ನು ಕರೆದುಕೊಂಡು ಬರೋದು ಒಂದೇ ಆಗಿತ್ತು, ಮೊನ್ನೆ ಅವರ ಚಿಕ್ಕಪ್ಪ ಬಂದು ಮದ್ವೆ card ಕೊಟ್ಟರು ನಾನು ಅವರನ್ನು ಇಷ್ಟು ಬೇಗ ಯಾಕೆ ಮದ್ವೆ ಅಂತ ಕೇಳಿದೆ ಅವ್ರು ಏನು replay ಮಾಡಿಲ್ಲ, ಆದ್ರೆ ನನ್ನ ಮನಸ್ಸಲ್ಲಿ ಒಂದು ದೊಡ್ಡ ಬಿರುಗಾಳಿನೇ ಸೃಷ್ಟಿ ಆಯ್ತು, ಅವರನ್ನು ಕಳೆದುಕೊಳ್ಳವೇ ಅನ್ನೋ ವಾಸ್ತವನಾ ಮನಸೂ ಒಪ್ಪಿಕೊಳ್ಳಲು ರೆಡಿ ಆಗಲಿಲ್ಲ ಮನಸೂ, ಅವತ್ತು ರಾತ್ರಿಪುರ ಕಣ್ಣೀರು, ಬರಿ ಅಳುವುದೇ, ಅವರು ಮೇಲೆ ಸಿಟ್ಟಾಗುವುದು, ಏನು ಮಾಡಲು ತಿಳಿಯುತ್ತಿಲ್ಲ, ಯಾವುದೇ ಬೇಡ, ಎಲ್ಲವನ್ನೂ ಬಿಟ್ಟು ಎಲ್ಲಿಗಾದರೂ ಹೋಗ್ಬೇಕು, ಈ ಜೀವನನೆ ಬೇಡ ಅನಿಸ್ತಾ ಇತ್ತು, ಎರಡು ದಿನ ಅವರನ್ನು thread ಅಲ್ಲಿ block ಮಾಡದು ಮತ್ತೆ unblock ಮಾಡುವುದು, ಮನಸ್ಸು ಎಸ್ಟು ಹೊಯ್ದಾಟ ಮಾಡ್ತಾ ಇತ್ತು ಅಂದ್ರೆ ಮನಸ್ಸೇ ಬೇಡ ಇದನ್ನ ಕಿತ್ತು ಹಾಕಬೇಕು ಅನಿಸ್ತಾ ಇತ್ತು, ಆದ್ರೆ ಅವರು ಕವಿತೆಗಳು ನನಗೆ ಮತ್ತೆ ಮತ್ತೆ ಹೇಳ್ತಾ ಇದ್ವು ನಮ್ಮ ಪ್ರೀತಿ ಅಂದ್ರೆ ಏನು, ಅದು ಈ ಜನ್ಮಕ್ಕೆ ಸೀಮಿತವಾಗಿಲ್ಲ, ಜನ್ಮಜನ್ಮತಾಂತರ ಪ್ರೀತಿ ಆದನ್ನು ಕಟ್ಟಿ ಹಾಕಲು ಹೋಗಬೇಡ ಅಂತ, ನಾನು ಅವರ ಪ್ರತಿಯೊಂದು ಕವಿತೆಗಳನ್ನು ಮತ್ತೆ ಮತ್ತೆ ಓದತಾ ಹೋದೆ ಅವುಗಳ ನಿಜವಾದ ಅರ್ಥವೆನು ತಿಳಿಯುತ್ತಾ ಹೋದಂತೆ ಮನಸೂ ಕ್ಲಿಯರ್ ಆಯ್ತು ಹೋಯ್ತು ನಿಜವಾದ ಪ್ರೀತಿ ಅಂದ್ರೆ ಏನು ಅಂತ ತಿಳೀತಾ ಹೋಯ್ತು, ನನ್ನ ಉಸಿರೇ ಪ್ರೀತಿ ಅದನ್ನ ಕಟ್ಟಿ ಹಾಕಲು ಪ್ರಯತ್ನ ಪಡುತ್ತಿರುವೆ, ಹಾಗೆ ಮಾಡಿದ್ರೆ ನನ್ನ ಉಸಿರು ನಿಂತು ಹೋಗುತ್ತದೆ ಅನ್ನೋದು ತಿಳಿಯಿತು, ಈ ಪ್ರೀತಿ ನನ್ನ ಇಷ್ಟ ವರ್ಷದಿಂದ ನನ್ನಲ್ಲಿ ಆಗದ ಬಲಾವಣೆಗಳನ್ನು ತಂದಿತು, ನಾನೇ ಸರಿ ಅನ್ನೋ ನನ್ನ ಅಹಂಕಾರವನ್ನು ನಾಶ ಮಾಡಿತು, ಇಲ್ಲಿವರೆಗೂ ದೇವರ ಮೇಲೆ ದ್ವೇಷ ಕಾರುತ್ತಿದ್ದ ನನ್ನನ್ನು ದೇವರ ಭಕ್ತಿಯ ಶಕ್ತಿ ಏನು ಅನ್ನೋದನ್ನು ತೋರಿಸಿಕೊಟ್ಟಿತು, ಪ್ರೀತಿ ಅಂದ್ರೆ ಬರಿ ಪಡೆದುಕೊಳ್ಳುವುದು ಅಲ್ಲ ತ್ಯಾಗ ಮಾಡುವುದೇ ಮೊದಲ ಆಯ್ಕೆ ಅಂತ, ನನ್ನಲ್ಲಿ ಇರೋ ಸಿಟ್ಟನ್ನು ಕಿತ್ತು ಹಾಕಿತು, ಎಲ್ಲರನ್ನೂ ಕ್ಷಮೆಸುವುದನ್ನು ಕಲಿಸಿತು, ನನ್ನ ಜವಾಬ್ದಾರಿ ಯಾವವು ಅನ್ನೋದನ್ನ ತಿಳಿಸಿತು, ನಿಜವಾದ ನಾನು ಯಾರೂ ಅಂತ ತಿಳಿಸಿತು ನನ್ನ ನೈಜ ಶಕ್ತಿ ಏನು, ನನ್ನ ಆತ್ಮದ ಏನನ್ನು ಹೇಳುತ್ತಿದೆ ಅದನ್ನು ಕೇಳಿಸಿಕೋ, ನಿನ್ನೊಳಗೆ ನೋಡು ಅಲ್ಲಿ ಎಸ್ಟು ಶಕ್ತಿ ಇದೆ, ಅದು ಆಚೆ ಬರಲು ಕಾಯುತ್ತಿದೆ, ಆ ಶಕ್ತಿ ನಿನಗೆ ನಿಡುವ ಎಸ್ಟೊಂದು ನೀಡಲು ಸಿದ್ಧವಿದೆ, ನನ್ನನ್ನು ನಿಜವಾದ ಚೇತನ್ ಮಾಡಿತು ಈ ಪ್ರೀತಿ, ನನ್ನಲ್ಲಿ ಇರೋ ಒಬ್ಬ ಬರಹಗಾರ ಹುಟ್ಟು ಹಾಕಿತು ಈ ಪ್ರೀತಿ, ನನ್ನಲ್ಲಿ ಇರೋ entrepreneur ಗೆ ಮರು ಜೀವ ಕೊಟ್ಟಿತು ನನ್ನ ಪ್ರೀತಿ, thank you Miss Anne Frank, ನೀವು ನನ್ನ ಪಾಲಿನ ದೇವತೆ ರಿ, ನನಗೆ ಯಾವಾಗಲೂ ನೀವೇ ರಾಧೆ, ಮುಂದಿನ ಜನ್ಮದಲ್ಲಿ ಮತ್ತೆ ಸಿಗಣೋ ಸಿಕ್ಕೆ ಸಿಕ್ಕೆ ಸಿಗತಿವಿ, ಅವಾಗ ಇನ್ನೂ ಹತ್ತಿರ ಹುಟ್ಟೋಣ, ಇನ್ನೂ ಎಂಟು ದಿನದಲ್ಲಿ ನಿಮ್ಮ ಮದುವೆ ಯಾವ ಭಯ ಇಲ್ಲದೆ ಎಲ್ಲವನ್ನೂ enjoy ಮಾಡಿ, ನನಗೆ ಯಾವ ಬೇಜಾರು ಇಲ್ಲ ನಾನು ನಿಮ್ಮನ್ನು ಮನಸೂ ಪೂರ್ತಿಯಾಗಿ ಹರಸುತ್ತೇನೆ, ನಿಮಗೆ ಒಳ್ಳೆಯ ಹುಡುಗ ಸಿಕ್ಕಿದಾನೆ, ನೀವು ತುಂಬ ವಿಶೇಷವಾದ ಹೂವು ನಿಮ್ಮನ್ನು ಅವನು ಚೆನ್ನಾಗಿ ನೋಡಿಕೊಳ್ಳುತ್ತಾನೆ, Happy married Life Miss Anne Frank, ಮುಂದಿನ ಜನ್ಮದಲ್ಲಿ ಸಿಗೋಣ, ನಿಮ್ಮ ಮುಂದಿನ ಜೀವನನ್ನು ಮನಸೂ ಪೂರ್ತಿಯಾಗಿ ಜೀವಿಸಿ, ಅವಾಗ ಅವಾಗ ಈ blog ಓದಿ May be ನಿಮಗೆ ಖುಷಿ ಆಗತ್ತೆ ಹಾಗೆ ನೀವು ಬರೀರಿ ನನಗೂ ಅವಾಗ ಅವಾಗ ಜಾಮೂನ್ ಸಿಕ್ಕ ಹಾಗೆ ಆಗತ್ತೆ,😜🤪😂, ನಿಮ್ಮ ಮದ್ವೇಲಿ ನನ್ನ ಫೇವರಿಟ್ ಜಾಮೂನ್ ಮಾಡಿಸ್ತೀರ ಬರ್ತೀನಿ 😜🤪😂, bye enjoy every moment of life

ಎಲ್ಲವೂ ಗೊಂದಲಮಯ

ಗಂಟೆ 7 ಓಹೋ ಮತ್ತೆ ಲೇಟಗಿ ಎದ್ದೆ, ಇವತ್ತು ಆಫೀಸಗೆ late ಛೆ ಈ ಹಾಳಾದು ನಿದ್ದೆಗೆ ಏನು ಮಾಡೋದು ಪ್ರತಿದಿನ ಇದೆ ಕಥೆ, ಈ ನಿದ್ದೆ ನನ್ನ ಬಿಡಲ್ವೋ ಅಥವಾ ನಾನು ನಿದ್ದೆ ಬಿಡಲ್ವೋ ಒಂದು ತಿಳಿತಾ ಇಲ್ಲ. ಹಲ್ಲುಉಜ್ಜುದು, ಸ್ನಾನ ಮಾಡೋದು,….. ಎಲ್ಲವು ಗಡಿಬಿಡಿ.ನಮ್ಮ ಜೀವನ ಶುರು ಆಗೋದಕ್ಕೂ ಮುಂಚೆನೇ ಗೊಂದಲ ಶುರು ಆಗತ್ತೆ 🤣. ಇನ್ನು ತಿಂಡಿ ತಿನ್ನೋದೋ ಬೇಡವೋ ಗೊಂದಲ, ತಿನ್ನಬೇಕು ಅಂದ್ರೆ ಏನು ತಿನ್ನೋದು ಗೊಂದಲ. ಏನೋ ಒಂದು ತಿಂದು bus stop ಗೆ ಓಡಬೇಕು ಬರೋ bus ತುಂಬಾ ರಶ್ ಇದೆ ಹತ್ತೋದು ಬೇಡವಾ ಅನ್ನೋ ಗೊಂದಲ, ಹತ್ತದೆ ಬಿಟ್ಟಿದ್ದಕ್ಕೆ ಮುಂದೆ ಬರೋ bus ಇನ್ನು ರಶ, ನಮಗಿಂತ ಮುಂಚೆ ಬಂದಿರೊ ಮ್ಯಾನೇಜರ್ ನೋಡಿದ್ರೆ ಒಂದ ತರ ಗೊಂದಲ, ಛೆ ಯಾವನಿಗೆ ಬೇಕು ಈ ಜೀವನ ಅನ್ನಿಸುತ್ತೆ??. ನಾವು ಎಲ್ಲಿಗೆ ಒಡತಾ ಇದೀವಿ ಒಂದು ಸಲೀನಾದ್ರು ತುಂಬಾ ಆಳವಾಗಿ ಯೋಚನೆ ಮಾಡತೀವ?, ಒಂದು ವೇಳೆ ಮಾಡಿದ್ರೂ ಒಂದು end result ಬರತಿವಾ?? ಇದ್ರಲ್ಲೂ ಗೊಂದಲ ಇದೆ ನಮಗೆ, ಒಂದು quote ಇದೆ ” confusion is happiness ” ಇದನ್ನ ಹೇಗೆ ಅರ್ಥ ಮಾಡಿಕೊಳ್ಳಬೇಕು ಅಂತ ಇನ್ನುವರೆಗೂ ಗೊತ್ತಾಗತ ಇಲ್ಲ ನಂಗೆ. Almost ಈ ಭೂಮಿ ಮೇಲೆ ಇರೋ ಜನರಲ್ಲಿ 90% ಜನರ ಹೀಗೆ ಇರಬಹುದು. ನಾವು ಎಲ್ಲರ ಒಂದರ ಹಿಂದೆ ಒಡತಾ ಇದೀವಿ ಅದು ಹಣ ಆಗಿರಬಹುದು, ಆಸ್ತಿ, ಅಂತಸ್ತು, ವ್ಯಕ್ತಿ, ಆಗಿರಬಹುದು ಆದ್ರೆ majority ಜನ ಹಣದ ಹಿಂದೆನೇ ಒಡತಾ ಇದೀವಿ ಆದ್ರೂ ನಮಗೆ ನಾವೇ & ಸುತ್ತಲೂ ಇರೋರಿಗೂ ಸುಳ್ಳು ಹೇಳತೀವಿ ನಾನು ಹಣದ ಹಿಂದೆ ಒಡತಾ ಇಲ್ಲ ಅಂತ. ಮಿಕ್ಕಿರೋ 10% ಜನರು ಹಣದ ಹಿಂದೆನೇ ಒಡತಾ ಇದಾರೆ ಆದ್ರೆ ತುಂಬಾ ಫಾಸ್ಟ್ ಆಗಿ ಹಾಗೆ ತುಂಬಾ ಶಿಸ್ತಿನ ಜೀವನ ಜೊತೆಗೆ ಹೋಗತಾ ಇದಾರೆ ಅಷ್ಟೇ. ಹಣದ ಹಿಂದೆ ಓಡೋದು ತಪ್ಪಾ ಹಾಗಾದ್ರೆ?? ಇದಕ್ಕೆ ನನ್ನ ಬಳಿ ಸರಿಯಾದ ಉತ್ತರ ಇಲ್ಲ ಯಾಕಂದ್ರೆ ನಾನು ಹಣದ ಹಿಂದೆ ಒಡತಾ ಇರೋನು ಆದ್ರೆ ನಾನು ಸ್ವಲ್ಪ slow ಆಗಿ ಒಡತಾ ಇದೀನಿ ಅಷ್ಟೇ 😜🤣. ಒಂದು ವೇಳೆ ನಮಗೆ ಬೇಕಾದಷ್ಟು ಹಣ ಸಿಕ್ಕರೂ ನಾವು ಇನ್ನು ಹೆಚ್ಚು ಗೊಂದಲಗೊಳ್ಳುತ್ತವೆ ಅಲ್ವಾ, ಮುಂದೆ ಏನು ಮಾಡೋದು ಅಂತ. ಹಾಗಾದ್ರೆ ನಾವು ಹುಡಕಾತಾ ಇರೊದು ಬೇರೆ ಏನೋ ಇದೆ?? ಏನದು?? ಸಂತೃಪ್ತಿ ಅಥವಾ ನಿರಾಳ. ಸಂತೃಪ್ತಿ ಸಿಗೋದು ಎಲ್ಲಿ?? ನಿರಾಳತೆ ಸಿಗೋದು ಎಲ್ಲಿ??, ಒಂದು ಸಲಿ ಸರಿಯಾಗಿ ಗಮನಿಸಿ ನಾವು ಶಿನೋವಾಗ ನಮ್ಮ ಹೃದಯ ಒಂದು ಕ್ಷಣ stop ಆಗತ್ತೆ ಅಂತೇ ಅವಾಗ ಇನ್ನೋದನ್ನ ಗಮನಿಸಿ ಶಿನು ಎಷ್ಟು ಹಿತ ಅನ್ನಿಸತ್ತೆ ಅಲ್ವಾ ಇದೆಲ್ಲ ನನ್ನ ಅನುಭವ ನಿಮಗ್ ಇದೆ ತರ ಅನ್ನಿಸತ್ತೆ ಇಲ್ವೋ ಗೊತ್ತಿಲ್ಲ, ಆದ್ರೆ ನಾನು ಯಾಕೆ ಈ ಉದಾಹರಣೆ ಕೊಟ್ಟೆ ಅಂದ್ರೆ ನಾವು ಈ ಕ್ಷಣ ಬದುಕಿದ್ರೆ ನಮ್ಮ ಜೀವನ ಎಷ್ಟು ಹಿತವಾಗಿ ಇರತ್ತೆ ಅಲ್ವಾ,ಆದ್ರೆ ನಾವು ಮಾಡ್ತಾ ಇರೋದು ಏನು ನಮ್ಮ ವರ್ಷ, ತಿಂಗಳು, ದಿನ, ಗಂಟೆ, ನಿಮಿಷ, ಹೋಗಲಿ ದೇಹ ಕೂಡ ಇಲ್ಲೇ ಇರತ್ತೆ ಆದ್ರೆ ಇದನ್ನ ಆಳೋ ರಾಜ ಅಂದ್ರೆ ಮನಸ್ಸು ಮಾತ್ರ ರಾಜ್ಯದಲ್ಲಿ (ದೇಹದಲ್ಲಿ ) ಇಲ್ಲದೆ ಎಲ್ಲೋ ಹಿಂದೇ (ಭೂತ ) ಅಥವಾ ಮುಂದೆ ( ಭವಿಷ್ಯದಲ್ಲಿ ) ಯುದ್ಧ ಮಾಡಕ್ಕೆ ಹೋಗತತ ಇರತ್ತೆ. ಅದಕ್ಕೆ ಎಲ್ಲವು ಗೊಂದಲ ನಮ್ಮ ಜೀವನದಲ್ಲಿ, ನಾವು ಹೇಗೆ ಬದುಕತಾ ಇದೀವಿ ಅಂದ್ರೆ ಈ ಕೋಳಿ ತಿಪ್ಪೆ ಕೇದರತ್ತೆ ಅಲ್ವಾ ಆ ತರ ನಾವು ನಿನ್ನೆಯಲಿ ಏನಿದೆ ನಾಳೆ ಏನಾಗತ್ತೆ ಅಂತ ಕೇದಾರತ ಇವತ್ತನ್ನ ಮುಂದೆ ತಿಪ್ಪೆ ಮಾಡ್ತಾ ಬದುಕತಾ ಇದೀವಿ ಅಲ್ವಾ, ಎಂತ ವಿಚಿತ್ರ ನೋಡಿ ನಮ್ಮ ಕೈಲಿ ಇವತ್ತೇ ಒಂದೇ ಇರೋದು ಆದ್ರೆ ನಾವು ಇವತ್ತ ಒಂದು ದಿನಾನು ಸರಿಯಾಗಿ ಬದುಕಲ್ಲ. ಯಾವಾಗಲು ನಮ್ಮ ಮನಸ್ಸು ಏನನ್ನಾದ್ರೂ ಹುಡುಕಲೇಬೇಕಾ ಹಾಗೆ ಒಂದು ಕ್ಷಣ ಸುಮ್ಮನೆ ಇರೋದಕ್ಕೆ ಬರೋದೇ ಇಲ್ವಾ ನಮಗೆ. ಇವಾಗ ಈ ಪೋಸ್ಟ್ ಬರಿಯೋದಕ್ಕೆ ಮುಂಚೆ ನಾನು ಎಷ್ಟೊಂದು problem ಬಗ್ಗೆ ಯೋಚಿಸಿ ಯೋಚಿಸಿ ನನ್ನ ತಲೇನ ತಿಪ್ಪೆ ಮಾಡಿದ್ದೆ ಆದ್ರೆ ಇವಾಗ ಎಷ್ಟೊಂದು ನಿರಾಳತೆ ಗೊತ್ತ ಯಪ್ಪಾ ಒಂದು ಸ್ವರ್ಗ ಅದು. ಇನ್ನೊಂದು ಏನು ಗೊತ್ತ ನಾವು ನಮ್ಮ ಬಗ್ಗೆ (ತನ್ನ ) ಬಗ್ಗೆ ಜಾಸ್ತಿ ಯೋಚಿಸಿದಷ್ಟು ಈ ಜೀವನ ಹಿಂದೆ ಮುಂದೆ ಆಗತ್ತೆ ಅದೇ ನಾವು ನಮ್ಮ ಸುತ್ತಿಲಿನ ಜನರು ಅಥವಾ ಸಮಾಜದ ಸುಧಾರಣೆ ಬಗ್ಗೆ ಯೋಚಿಸಿದ್ರೆ ನಮ್ಮ ಮನಸ್ಸಿಗೆ ಏನಾದ್ರು ಮಾಡಬೇಕು ಅನ್ನೋ ಹುಮ್ಮಸು ಧ್ಯರ್ಯ ಬರತ್ತೆ ಅಲ್ಲ ಇದು ನನ್ನ ಅನುಭವ ಅಷ್ಟೇ. ಈ ಪ್ರಕೃತಿಯಲ್ಲಿ ಇರೋ ಎಲ್ಲ ಚರಚರ ಜೀವಿಗಳನ್ನ ನೋಡಿ ( ಮನುಷ್ಯ ಒಬ್ಬನ್ನ ಬಿಟ್ಟು )ಅವು ಅವುಗಳಿಗೆ ಗೊತ್ತಿಲ್ಲದೇ ಈ ಪ್ರಕೃತಿ ಉಪಯೋಗ ಆಗೊತರ ಬದುಕತಾ ಇವೆ, ಮನುಷ್ಯ ಮಾತ್ರ ಎಲ್ಲಾನು damage ಆಗೋ ತರ ಬದುಕುತ್ತಾನೇ ಅದು ಎಲ್ಲವನ್ನು ತಿಳಿದವನ ಕತೆ ಇದು. ಒಂದು ಸಣ್ಣ ಉದಾಹರಣೆ ಕೊಡತೀನಿ ನೀವು ಒಂದು ಸಲಿ try ಮಾಡಿ ಬಸ್ಸಲ್ಲಿ ಒಂದು ಸಲಿ ಯಾರಿಗದ್ರು ನಿಮ್ಮ ಶೀಟ್ ಬಿಟ್ಟು ಕೊಡಿ, ಅವಾಗ ಆಗೋ ನಿರಾಳತೆ, ಸಂತೃಪ್ತಿ ನೀವು ಕೋಟಿ ದುಡ್ಡು ಕೊಟ್ಟರು ಸಿಗಲ್ಲರೀ, ನಿಮ್ಮ ಮನಸಲ್ಲಿ ಮತ್ತೆ ಮತ್ತೆ ಏಳೋ ಗೊಂದಲಕ್ಕೆ ಇದೆ ಪರಿಹಾರ ಅನ್ನಿಸತ್ತೆ ಇನ್ನೊಬ್ಬರಗೆ ಒಳ್ಳೇದು ಮಾಡೋದು, ನಾವು ಪ್ರತಿದಿನ ಮುಗಿದಾಗ ಇನ್ನೊಂದು ಒಳ್ಳೆ ದಿನದ ಕಡೆಗೆ ಅಲ್ವಾ ಮತ್ತೆ ಯಾಕೆ ಈ ಗೊಂದಲ, ಚಿಂತೆ ಕಿತ್ತಾಟಗಳು, ಪ್ರತಿಕ್ಷಣದಲ್ಲೇ ಬದುಕಿ ಅದೇ ನಿಜವಾದ ಜೀವನ ನೀವು ಹಿಂದೇ ಮುಂದೆ ಬದುಕಿದರೆ ಎಲ್ಲಾನು ತಿಪ್ಪೆ ಆಗತ್ತೆ ಉಷಾರು 🤪😜🤣

ನಾನು ಯಾಕೆ ಈ blog ಬರೀತಾ ಇದೀನಿ

ನಿಜ್ವಾಗ್ಲೂ ಗೊತ್ತಿಲ್ಲರಿ, ಯಾಕಂದ್ರೆ ನನ್ನ ತಲೆಲಿ ಒಡತಾ ಇರೋ ಎಷ್ಟೊಂದು ಯೋಚನೆಗಳು, ಚಿಂತನೆಗಳಿಗೆ ಇನ್ನೊಬ್ಬರ ಮನದಲ್ಲಿ ಜೀವವಾಗಿ ಹುಟ್ಟಬಹುದು ಅಥವಾ ಇನ್ನೊಬ್ಬರ ಮನವನ್ನು ಗೊಂದಲಕ್ಕೆ ನುಕಬಹುದು, ಇಲ್ಲ ಇನ್ನೊಬ್ಬರ ಬದುಕನ್ನ ಬದಲಾಯಿಸಬಹುದು ಅಥವಾ ನನ್ನ ಜೀವನ ಬದಲಾಯಿಸಬಹುದು, ಆದ್ರೆ ಈ blog ನಾ ಓದಬೇಕು ಅಂತ ಏನು ಆಶೆ ಇಲ್ಲ, ಇದನ್ನ ಬಾರಿಸ್ತಾ ಇರೋನು ಅವನು ನಾನು ಮಾಧ್ಯಮ ಮಾತ್ರ ಇಲ್ಲ, ನಾವು ಅವಾಗ ಅವಾಗ ನಮಗೆ ಖುಷಿಯಾಗೋ ಹಾಗೂ ಭಯಪಡೋ ಕೆಲಸಗಳನ್ನ ಮಾಡಬೇಕಂತೆ ಆವಾಗ್ಲೇ ಈ ಜೀವನದಲ್ಲಿ ಏನು miss ಮಾಡ್ಕೋತ ಇದೀವಿ ಅನ್ನೋದು ಗೊತ್ತಾಗತ್ತೆ. ಈ ಸಮಾಜ ಅಥವಾ ನಮ್ಮ ಸುತ್ತಿಲಿನ ಜನ ನಮ್ಮನ್ನು ಎಷ್ಟು ಚನ್ನಾಗಿ tune ಮಾಡತಾ ಇದಾರೆ ಅಂದ್ರೆ ನಾವು ಪ್ರತಿಕ್ಷಣ ಭಯ ಅಥವಾ ಗೊಂದಲದಲ್ಲಿ ಬದುಕುಬೇಕು ಯಾಕಂದ್ರೆ ಅವರನ್ನು ಹಾಗೆ ಹಿಂದೆ ಹೋಗಿರೋರು tune ಮಾಡಿದ್ರೂ, ನಾವು ಅವರ ಹಾಗೆ ಬದುಕಿದ್ರೆ ಮುಂದೆ ಬರೋರನ್ನ tune ಮಾಡತೀವಿ 😜🤣. ಯಾರು ಏನು ಅಂದುಕೊಳ್ಳುವರು, ಅದನ್ನ ಮಾಡಬೇಡ loss ಆಗತಿಯ, ಇದನ್ನ ಮಾಡು ಲಾಭ ಆಗತ್ತೆ ಎಲ್ಲದಕ್ಕೂ suggestion ಕೊಟ್ಟೆ ಕೊಡತಾರೆ, ಸೂರ್ಯ ಚಂದ್ರ ಪ್ರಕೃತಿ, ಗಾಳಿ, ನದಿ ಇವುಗಳನ್ನು ನೋಡಿ ಅವು ಎಲ್ಲವೂ ತಮಗೆ ಹೇಗೆಬೇಕು ಹಾಗೆ ನಡೀತವೆ ಅಂದ್ರೆ ನ್ಯಾಚುರಲ್ ಆಗಿ, may be ಅವುಗಳಿಗೆ ವಿಚಾರ ಮಾಡೋ ಶಕ್ತಿ ಇಲ್ಲ ಅದಕ್ಕೆ ನ್ಯಾಚುರಲ್ ಆಗಿವೆ ವಿಚಾರ ಮಾಡೋ ಶಕ್ತಿ ಇದ್ದದ್ರೆ ಅವು ನಮ್ಮ ಹಾಗೆ ಎಲ್ಲರನ್ನ ಮೆಚ್ಚಿಸೋಕ್ಕೆ ಬದುಕತಾ ಇರುತಿದ್ದವು. ಹೋಗಲಿ ನಾವು ಎಷ್ಟೆಲ್ಲ ಮಾಡತೀವಿ ಅಂದ್ರೆ ದುಡ್ಡು ಹೆಸರು, ಆಸ್ತಿ ಅಂತಸ್ತು ಆದ್ರೆ ಕೊನೆಗೆ ಉಳಿಯೋದು ಏನು ಮತ್ತೆ ಆಶೆಗಳೇ ಅಲ್ವಾ, ನಾವು ರಾಮ, ಬುದ್ಧ, ಬಸವಣ್ಣ, ಗಾಂಧಿ, ಭಗತ, ಸುಭಾಷ, ಕಲಾಂ, ರತನ ಟಾಟಾ, ಇವರಲ್ಲ ನಮ್ಮ ಮನಸಲ್ಲಿ ಇರೊದು ಅವರು ಕಳಿಸಿರೋ ಆಸ್ತಿ ಅಂತಸ್ತ ಇಂದ ಅಲ್ಲ ಅವರ ಗುಣಗಳು ಹಾಗೂ ಆ ಗುಣಗಳಿಂದ ಈ ಸಮಾಜಕ್ಕೆ ಮಾಡಿರೋ ಉಪಕಾರಗಳಿಂದ ಅಲ್ವಾ, ನಿಮ್ಮ ಮನಸಲ್ಲಿ ಹಾಗೆ ಒಂದು test ಮಾಡಿ ನೀವು ನಿಮ್ಮ ಫ್ಯಾಮಿಲಿ ಅಥವಾ ನಿಮಗೆಗೋಸ್ಕರ ಏನಾದ್ರು ಮಾಡಿಕೊಳ್ಳಬೇಕು ಅಂತ ಯೋಚನೆ ಮಾಡಿ ಅವಾಗ ನಿಮ್ಮ ಮನಸಲ್ಲಿ ಚಿಕ್ಕ ಭಯ ಅಥವಾ ದುಗುಡ ಹುಟ್ಟತ್ತೆ, ಅದೇ ನೀವು ಈ ಸಮಾಜದಲ್ಲಿ ಏನಾದ್ರು ಒಂದು ಬದಲಾವಣೆ ತರಬೇಕು ಅಥವಾ ಈ ಸಮಾಜಕ್ಕೇ ಒಳ್ಳೇದು ಮಾಡಬೇಕು ಅಂತ ಯೋಚನೆ ಮಾಡಿ ನಿಮ್ಮಲ್ಲಿ ಒಂದು ರೀತಿಯ ಹುಮ್ಮಸ್ಸು ಹುಟ್ಟಿಕೊಳ್ಳತ್ತೆ ಅಲ್ವಾ ಅದು ನನಗೆ ಆಗತಾ ಇರೋ ಅನುಭವ ಆದ್ರೆ ಎಲ್ಲರಿಗೂ ಆಗತ್ತೆ ಅನ್ನೋದು ನಂಗೆ ಗೊತ್ತಿಲ್ಲ. ಈ ಮನುಷ್ಯ ಸಂಘಜೀವಿ ಅಂದ್ರೆ ನಾವು ಯಾವಾಗ್ಲೂ ಸಮಾಜದಲ್ಲಿ ಬುದುಕೋದನ್ನ ಇಷ್ಟಪಡುತ್ತೇವೆ ಎಲ್ಲರ ಜೊತೆಗೆ ಮಾತನಾಡುತ್ತ, ಎಲ್ಲರ ಜೊತೆಗೆ ಖುಷಿ ಖುಷಿಯಾಗಿ ಹೊಂದಾಣಿಕೆ ಮಾಡಿಕೊಂಡ ಬದುಕ್ಕುತ್ತ ಬಂದಿದೀವಿ ಹಾಗೆ ಮುಂದೆ ಬದುಕಿತೀವಿ ಅನ್ನೋದು ಸತ್ಯ. ನಾವು ಸಾಯೋವಾಗ ನಮಗೆ ನಮ್ಮನ ತುಂಬಾ ಕಾಡೋದು ನೆನಪುಗಳು ಮಾತ್ರ ಅಂತೇ ಅಂದ್ರೆ ನಾವು ಹೇಗೆ ಬದುಕಿವಿ ಅನ್ನೋ ನೆನಪು ನಮಗೆ ಅತಿ ದೊಡ್ಡ ಆಸ್ತಿ. ಇರೊದು ಒಂದು ಜೀವನ ಎಲ್ಲರನ್ನು ಪ್ರೀತಿಸುತ್ತ ಎಲ್ಲರ ಜೊತೆಗೆ ಖುಷಿ ಖುಷಿಯಾಗಿ ಬದುಕೋಣ 🥰☺️☺️