ಮನಸನ್ನು ಶೂನ್ಯವಾಗಿಸುವುದು ಹೇಗೆ

ಮನಸನ್ನು ಶೂನ್ಯವಾಗಿಸುವುದು ಅಂದ್ರೆ ಏನು? ಮನಸಲ್ಲಿ ಯಾವುದೇ thoughts ಇಲ್ಲದೆ ಇರೋದು, ಯಾವುದೇ ಆಸೆಗಳು, ಭಯಗಳು, ಯಾವುದೇ attachments ಇಲ್ಲದೆ, ಈ ಕ್ಷಣದಲ್ಲಿ ಇದ್ದು ವಾಸ್ತವದಲ್ಲಿ ಇರುವುದು. ನಿಮ್ಮ ಮನಸಲ್ಲಿ ಏಳೋ ಎಲ್ಲವನ್ನೂ ಕೇವಲ ಸಾಕ್ಷಿಯಾಗಿ ನೋಡುವುದು. ನಾವು ಯಾವಾಗ ನಮ್ಮ ಮನಸನ್ನು ಶೂನ್ಯವಾಗಿಸುತ್ತೇವೆ ಅವಾಗ ನಮಗೆ ನಮ್ಮಲ್ಲಿ ಏಳೋ ಪ್ರತಿಯೊಂದು thoughts ನಾವು ತುಂಬ clear ಆಗಿ ಅರ್ಥವಾಗುತ್ತದೆ ಅಥವಾ ನಮ್ಮಲ್ಲಿ ಏಳುವ ಎಲ್ಲಾ thoughts ಗಳನ್ನು ನಾವು separate ಆಗಿ ನೋಡಿ ಯಾವ thoughts ಗಳಿಂದ ನಮಗೆ ಉಪಯೋಗವಿದೇ ಯಾವುಗಳಿಂದ ಉಪಯೋಗವಿಲ್ಲ ಎನ್ನುವುದು ತಿಳಿಯುತ್ತ ಹೋಗುತ್ತದೆ. ನಿಮ್ಮ ಮನಸ್ಸನ್ನು ಶೂನ್ಯವಾಗಿಸುವುದನ್ನು ಕಲಿತರೆ ನಿಮ್ಮ ಗಮನ ತುಂಬ sharp ಆಗುತ್ತ ಹೋಗುತ್ತದೆ. ಯಾವಾಗ ನಿಮ್ಮ ಮನಸ್ಸು ಶೂನ್ಯವಾಗುತ್ತದೆ ಆಗ ತೆಗೆದುಕೊಳ್ಳುವ ಯಾವದೇ ನಿರ್ಧಾರಗಳು ಯಾವುದೇ ಆಸೆ ಮತ್ತು ಭಯಗಳು ಇಲ್ಲದೆ ತೆಗೆದುಕೊಳ್ಳುತ್ತೀರಾ, ಹಾಗೆ ತೆಗೆದುಕೊಳ್ಳುವ ನಿರ್ಧಾರಗಳು ಮೇಲೆ ಯಾವುದೇ attachments ಇರೋದಿಲ್ಲ, so ನಿಮಗೆ ಆ ನಿರ್ಧಾರಗಳಿಂದ ಬರೋ results ಮೇಲೆ ಯಾವುದೇ ನಿರೀಕ್ಷೆ ಇಲ್ಲದೆ ಬೇಜಾರು ಆಗುವುದಿಲ್ಲ. ಆದ್ರೆ ಮನಸನ್ನು ಶೂನ್ಯವಾಗಿಸುವುದು ಹೇಗೆ
ಮೊದಲು ಮನಸ್ಸು ಅಂದ್ರೆ ಏನು?, ಅದು ಹೇಗೆ ಹುಟ್ಟಿದೆ?, ಹೇಗೆ ಕೆಲಸ ಮಾಡುತ್ತದೆ? . ನೀವು ಯಾವತ್ತಾದರೂ ಚಿಕ್ಕ ಮಕ್ಕಳನ್ನ observe ಅವರು ದೊಡ್ಡವರ ತರ ಜಾಸ್ತಿ ಮತ್ತೆ ಮತ್ತೆ upset ಆಗಲ್ಲ?, ಅವರೂ ಯಾಕೆ ಅಷ್ಟು altra Pro active ಆಗಿರುತ್ತಾರೆ? ಚಿಕ್ಕ ಚಿಕ್ಕ ವಿಷಯಗಳಿಗು ನಗುತ್ತಾರೆ, ಯಾವಾಗಲೂ ತುಂಬಾ ಪ್ರಶಾಂತವಾಗಿ ಇರುತ್ತಾರೆ, ಅವರು ೆ ಲ್ಲವನ್ನೂ ತುಂಬ ನೈಜವಾಗಿ ಹಾಗೂ ತನ್ಮಯತೆಯಿಂದ ಮಾಡುತ್ತಾರೆ, ಮಕ್ಕಳಿಗೆ ಎಲ್ಲವೂ ತುಂಬ ಕುತೂಹಲಗಳೇ, ಏನನ್ನು ಮುಟ್ಟಬೇಕು ಅನ್ನೋ ಗುರಿಯಿಲ್ಲ ಹಾಗೆ ಕಳೆದುಕೊಳ್ಳುವ ಭಯವಿಲ್ಲಾ, ಇವೆಲ್ಲನ್ನೂ ಯಾವತ್ತಾದರೂ observe ಮಾಡಿದಿರಾ, ಇವೆಲ್ಲ ದೊಡ್ಡವರಿಗೆ ಮಾಡಕ್ಕೆ ಸಾಧ್ಯವಿಲ್ಲ ಆದ್ರೆ ಚಿಕ್ಕ ಮಕ್ಕಳಿಗೆ ಹೇಗೆ ಸಾಧ್ಯ, ಯಾಕಂದ್ರೆ ಅವರಲ್ಲಿ ಮನಸ್ಸು ಶೂನ್ಯವಾಗಿರುತ್ತದೆ(ಮನಸ್ಸೇ ಇರಲ್ಲ) ಅಥವಾ ಮನಸ್ಸೂ ಇನ್ನೂ ಬೆಳೆಯೋ stage ಅಲ್ಲಿ ಇರುತ್ತದೆ,
ನಮಗೆ ದೊಡ್ಡವರಿಗೆ ಯಾಕೆ ಇದು ಸಾಧ್ಯವಿಲ್ಲ, ಸಾಧ್ಯವಿಲ್ಲ ಅಂತ ಅಲ್ಲ ನಾವು ಪ್ರಯತ್ನ ಮಾಡಿಲ್ಲ ಅಷ್ಟೇ, ನಿಮ್ಮ ಮನಸ್ಸಿಗೆ ಯಾವುದೇ ಅಸ್ತಿತ್ವ ಇಲ್ಲ, ಯಾಕಂದ್ರೆ ಅದು ಯಾವಾಗಲೂ ಬದಲಾಗುತ್ತಲೇ ಇರುತ್ತದೆ, ಒಂದು ವೇಳೆ ಅದಕ್ಕೆ ಅಸ್ತಿತ್ವ ಇದ್ರೆ ಅದು ಬದಲಾಗಲೇ ಬಾರದು ಅಲ್ವಾ, ಇಮ್ಯಾಜಿನ್ ಮಾಡಿಕೊಳ್ಳಿ ಒಂದು ಖಾಲಿ ಹಾಳೆ ಮೇಲೆ ನೀವು ಮೊದಲು ಒಂದು ದೊಡ್ಡ ಸರ್ಕಲ್ ಅಥವಾ ಝೀರೋನಾ ಬರ್ತೀರಿ ನಂತರ ಅದರ ಒಳಗೆ ಇನ್ನೊಂದು ಚಿಕ್ಕ ಸರ್ಕಲ್ ಬರಿತಿರ, ಇವಾಗ ಆ ಎರಡು ಸರ್ಕಲ್ ನಡುವೆ gap ಇರುತ್ತದೆ ಅಲ್ವಾ ಅದು ತುಂಬಾ ಮುಕ್ಯವಾದ ಭಾಗ ಇದನ್ನ ನೆನಪಿಡಿ. ಈಗ ನಮ್ಮ ಮನಸ್ಸು ಹೇಗೆ ಸೃಷ್ಟಿ ಆಗಿದೆ ಅನ್ನೋದನ್ನ ತಿಳಿದುಕೊಳ್ಳೋಣ, ನಮಗೆ 8 ವರ್ಷ ಆಗುವರೆಗೆ ಮನಸ್ಸೂ ಇರುವುದಿಲ್ಲ ಬರಿ ದೇಹ ಮತ್ತು ಆತ್ಮ ( ಇದನ್ನ ನಾನು ಅಷ್ಟಾವಕ್ರ ಗೀತ Book ಅಲ್ಲಿ ಓದಿದೀನಿ) 8 ವರ್ಷ ಆದ ಮೇಲೆ ಒಂದು ಶಕ್ತಿ ಅಥವಾ ಎಲ್ಲವನ್ನೂ ನೆನೆಪು ಇಟ್ಟುಕೊಳ್ಳುವ ಒಂದು ಶಕ್ತಿಯಾಗಿ ನಮ್ಮೊಳಗೆ ಸೇರುತ್ತದೆ, ಇದೆ ಮನಸ್ಸು. So ಆ ಎರಡು ಸರ್ಕಲಗಳ ನೋಡಿವೆ Gap ಇದೆ ಅಲ್ವಾ ಅದೇ ಮನಸ್ಸು, ಅಂದ್ರೆ ಹೊರಗಿನ ಸರ್ಕಲ್ ನಮ್ಮ ದೇಹ, ಒಳಗಿನ ಸರ್ಕಲ್ ನಮ್ಮ ಆತ್ಮ, ಈ ಎರಡು ಸರ್ಕಲ್ ನಡುವೆ ಇರೋದು ನಮ್ಮ ಮನಸ್ಸು. ಈ ಮನಸ್ಸು ನೆನಪುಗಳನ್ನು, ಭಯಗಳನ್ನ, ಆಸೆಗಳನ್ನು ತನ್ನೊಳಗೆ ಸ್ಟೋರ್ ಮಾಡಿಕೊಂಡು ತನ್ನ ರೂಪವನ್ನು ಪಡೆದುಕೊಳ್ಳುತ್ತದೆ. ಅಂದ್ರೆ ನಾವು 8 ವರ್ಷದ ಚಿಕ್ಕ ಮಗುವಾಗಿದ್ದಾಗಿಂದ ಏನೇನೇ ಘಟನೆಗಳು, ನೆನೆಪು, ಭಯಗಳು, ಆಸೆಗಳು, ಅವುಗಳನ್ನು ಒಂದಕ್ಕೊಂದು ಜೋಡಣೆ ಮಾಡಿಕೊಂಡು ತನಗೆ comfort ಮಾಡೋ ರೀತಿಯಲ್ಲಿ ರೂಪಗೊಳ್ಳುತ್ತದೆ. ಆದ್ರೆ ಮನಸ್ಸಿಗೆ ಒಂದು ತುಂಬಾ ವಿಶೇಷವಾದ ಒಂದು ಶಕ್ತಿ ಇದೆ ಅದು ಇಮ್ಯಾಜಿನ್ ಮಾಡಿಕೊಳ್ಳುವುದು. ಒಳ್ಳೆಯದು ಕೆಟ್ಟದು ಎರಡನ್ನು ಇಮ್ಯಾಜಿನ್ ಮಾಡಿಕೊಳ್ಳುತ್ತದೆ. ಸುಮ್ಮನೆ ನೀವೇ ಪ್ರಶ್ನೆ ಮಾಡಿಕೊಳ್ಳಿ ಒಂದು ವೇಳೆ ಮನಸ್ಸಿಗೆ ನಿರ್ಧಿಷ್ಟವಾದ ಅಸ್ತಿತ್ವ ಇದ್ದಿದ್ದರೆ ಅದು ಒಂದು ಒಳ್ಳೇದನಷ್ಟೇ ಅಥವಾ ಕೆಟ್ಟದ್ದನ್ನು ಅಷ್ಟೇ ಯೋಚಿಸಬೇಕು ಅಲ್ವಾ , ಎರಡನ್ನೂ ಯೋಚಿಸುತ್ತದೆ ಅಲ್ವಾ. ಈ ಎರಡು ಸರ್ಕಲಗಳ ನಡುವೆ gap ಇದೆ ಅಲ್ವಾ ಅಲ್ಲಿ ನಿಮ್ಮ ಸುತ್ತಲೂ ನಡೆಯೋ ಎಲ್ಲವು ಸ್ಟೋರ್ ಆಗುತ್ತದೆ ಅದರಿಂದ ನಿಮ್ಮ ಮನಸೂ ಇಮ್ಯಾಜಿನ್ ಮಾಡುತ್ತಲೆ ಇರುತ್ತದೆ.so ಈಗ ನಿಮ್ಮ ದೇಹ, ನಿಮ್ಮ ಮನಸು, ನಿಮ್ಮ ಆತ್ಮ ಎಲ್ಲವೂ ಬೇರೆ ಬೇರೆ ಭಾಗಗಳು. ಆತ್ಮದ ಬಗ್ಗೆ ಮುಂದೆ ಇನ್ನೂ ಹೆಚ್ಚಿನ ಜ್ಞಾನವನ್ನು ಪಡೆದುಕೊಂಡು ಬರೆಯುತ್ತೇನೆ.
ಈಗ ನಿಮ್ಮಲ್ಲಿ ಏಳೋ ಪ್ರತಿಯೊಂದು ಯೋಚನೆಗಳು ಸಾಕ್ಷಿ ರೂಪದಲ್ಲಿ ನೋಡಿ, ನಿಮ್ಮಲ್ಲಿ ಏಳೋ ಪ್ರತಿಯೊಂದು thoughts observe ಮಾಡಿ, ಅವುಗಳ ಜೊತೆಗೆ ಹೋಗಬೇಡಿ ಸುಮ್ಮನೆ ಗಮನಿಸಿ, ಒಂದು ವೇಳೆ ನಿಮಗೆ ಗಮನಿಸಲು ಆಗಲಿಲ್ಲ ಅಂದ್ರೆ ಮತ್ತೆ ಮತ್ತೆ ನೆನಪು ಮಾಡಿಕೊಳ್ಳಿ ನಿಮ್ಮ ಮನಸ್ಸಿಗೆ ಅಸ್ತಿತ್ವ ಇಲ್ಲ ಅನ್ನೋದನ್ನ. ಒಂದು ವೇಳೆ ನೀವು ನಿಮ್ಮ thoughts ಗಳನ್ನ ಸಾಕ್ಷ ರೂಪದಲ್ಲಿ ನೋಡುತ್ತ ಹೊಂದಂತೆ ನೀವು ಯಾವ thoughts ನಿಮಗೆ ಮನಸೂ ಶಾಂತವಾಗುತ್ತದೆ, ಯಾವ thoughts ಗಳಿಂದ ಮನಸೂ ಗೊಂದಲಗೊಳ್ಳುತ್ತದೆ ಅನ್ನೋದನ್ನ ತಿಳಿಯುತ್ತ ಹೋಗುತ್ತೀರಿ. ಹಾಗೆ ನಿಮಗೆ ಯಾವ thoughts ನಿಮಗೆ ಒಳ್ಳೆಯದು ಹಾಗೆ ಕೆಟ್ಟದ್ದು ಅನ್ನೋದು ತಿಳಿಯುತ್ತಾ ಹೋಗುತ್ತದೆ, ನೀವು ನಿಮ್ಮ ಮನಸನ್ನು ಶೂನ್ಯವಾಗಿಸಿದರೆ ನಿಮ್ಮ ಉಸಿರಾಟವನ್ನು ತುಂಬ ನೈಜವಾಗಿ ಕೇಳುತ್ತಾ ಹೋಗುತ್ತದೆ, ನೀವು ಯಾವುದೇ thoughts ಓಡಾಡುವುದಿಲ್ಲ, ಕೇವಲ ಎಲ್ಲವನ್ನೂ ಗಮನಿಸುತ್ತ ಹೋಗುತ್ತೀರಿ, ಯಾವಾಗ ನಿಮ್ಮ ಮನಸ್ಸು ಶೂನ್ಯವಾಗುತ್ತದೆ ಅವಾಗ ಎಲ್ಲವೂ ನೈಜವಾಗುತ್ತಾ ಹೋಗುತ್ತವೆ, ನಿಮ್ಮಲ್ಲಿ ಭಯ thoughts ಸೃಷ್ಟಿ ಆದರೆ ಅದು ಯಾಕೆ ಸೃಷ್ಟಿಯಾಗಿದೆ ಅದನ್ನ ಹೇಗೆ ನಿವಾರಿಸಬೇಕು ಅನ್ನೋದು ತಿಳಿಯುತ್ತು ಹೋಗುತ್ತದೆ, ಹಾಗೆ ಆಸೆಗಳ thoughts ಹುಟ್ಟಿದರೆ ಅದು ಯಾಕೆ ಹುಟ್ಟಿದೆ ಅದರಿಂದ ನಿಮಗೆ ಏನು ಪ್ರಯೋಚನ ಎಲ್ಲವು ತಿಳಿಯುತ್ತಾ ಹೋಗುತ್ತದೆ, ನಿಮಗೆ ನಿಮ್ಮ thoughts ಮೇಲೆ ಸಂಪೂರ್ಣ ನಿಯಂತ್ರಣ ಸಿಗುತ್ತಾ ಹೋಗುತ್ತದೆ. ನೀವು ತುಂಬಾ ಗಮನಿಸುವುಕೆಯನ್ನು ಪಡೆಯುಕೊಳ್ಳುವಿರಿ.
ನೀವು ನಿಮ್ಮ ಮನಸ್ಸು ಕೇವಲ ನಿಮ್ಮ ದೇಹ ಮತ್ತು ಆತ್ಮದ ನಡುವೆ ಇರುವ ಒಂದು gap ಅಂತ ಮತ್ತೆ ಮತ್ತೆ ತಿಳಿಯುತ್ತಾ ಹೋದಂತೆ ನಿಮಗ ಎಲ್ಲವೂ ಸರಳವಾಗುತ್ತದೆ ಹೋಗುತ್ತದೆ, ಈ ನಂಬಿಕೆಯಿಂದ ನೀವು ನಿಮ್ಮಲ್ಲಿ ಏಳೋ ಪ್ರತಿಯೊಂದು thoughts ನೀವು ಕೇವಲ ಸಾಕ್ಷಿ ರೂಪದಲ್ಲಿ ನೋಡಬಲ್ಲಿರಿ. ಇದನ್ನ ನೀವು ಮತ್ತೆ ಮತ್ತೆ ಪ್ರಾಕ್ಟೀಸ್ ಮಾಡಬೇಕು, ಒಂದು ಸಲಿ ನೀವು ಇದರ ರುಚಿ ಅನುಭವಿಸಬಸಿದರೆ ನಿಮಗೆ ಯಾವ ನೋವುಗಳು, ಭಯಗಳು, ನಿರಾಸೆಗಳು, ದುಃಖವಾಗುದಿಲ್ಲ. ನೀವು ತುಂಬ ನೈಜವಾಗುತ್ತಾ ಹೋಗುತ್ತೀರಿ. ನಿಮ್ಮ ಮನಸನ್ನು ಶೂನ್ಯ ಮಾಡುವುದನ್ನು ನೀವು ಕಲಿತರೆ ನೀವು ತುಂಬ ಶಾಂತವಾಗುತ್ತಾ ಹೋಗುತ್ತೀರಿ. ನಿಮ್ಮ ಮನಸ್ಸು ಆತಂಕಗಳಿಂದ ದೂರವಾಗುತ್ತಾ ಹೋಗುತ್ತದೆ. ನಿಮ್ಮಲ್ಲಿ ಏಳೋ ಪ್ರತಿಯೊಂದು thoughts ಮೂಲ ಹುಡುಕಿ ಪರಿಹಾರ ಕಂಡುಹಿಡಿಯಲು ಸಶಕ್ತವಾಗುತ್ತಾ ಹೋಗುತ್ತೀರಿ. ಮನಸನ್ನು ಶೂನ್ಯ ಮಾಡುವುದು ಒಂದು gift ಅದನ್ನ ನಿಮಗೆ ನೀವೇ ಒಬ್ಬರೇ ಕೊಡಲು ಸಾಧ್ಯ. ಇದರಿಂದ ನಿಮ್ಮ ಬದುಕಿನ ಎಲ್ಲ problems solve ಆಗುತ್ತವೆ.ಈ blog ಬರೆದಿರುವುದು ಕೇವಲ ನನ್ನ ಅನುಭವ ಅಷ್ಟೇ, ನಿಮಗೆ ಕೂಡ ಇದೆ ಅನುಭವ ಆಗುತ್ತದೆ ಅಂತ ಬಾವಿಸುತ್ತೇನೆ, ಇವನು ದಿನ ಪೂರ್ತಿ ಮನಸ್ಸಿನ ಶೂನ್ಯತೆಯಲ್ಲೇ ಇರುತ್ತಾನೆ.

ಎಲ್ಲವೂ ಶೂನ್ಯವೇ

ನಗುವಿನ ಹಿಂದೆ ನೋವುಗಳು, ನೋವಿನ ಹಿಂದೆ ನಲಿವು, ಕಳೆದುಕೊಳ್ಳುವುದರ ಹಿಂದೆ ಪಡೆದುಕೊಳ್ಳುವಿಕೆ, ಪಡೆದುಕೊಳ್ಳುವುದರ ಹಿಂದೆ ಕಳೆದುಕೊಳ್ಳುವಿಕೆ, ವರ್ತಮಾನದ ಹಿಂದೆ ಭೂತ, ಭೂತದ ಹಿಂದೆ ವರ್ತಮಾನ, ಸೃಷ್ಟಿ ಹಿಂದೆ ವಿನಾಶ, ವಿನಾಶದ ಹಿಂದೆ ಸೃಷ್ಟಿ, ಹಗಲಿನ ಹಿಂದೆ ರಾತ್ರಿ, ರಾತ್ರಿಯ ಹಿಂದೆ ಹಗಲು, ಕನಸುಗಳ ಹಿಂದೆ ನನಸುಗಳು, ನನಸುಗಳ ಹಿಂದೆ ಕನಸುಗಳು, ಎಲೆಗಳ ಉದುರುವಿಕೆ ಹಿಂದೆ ಮತ್ತೆ ಹೊಸ ಚಿಗುರು, ಹೊಸ ಚಿಗುರಿನ ಹಿಂದೆ ಎಲೆ ಉದುರುವಿಕೆ, ತ್ಯಾಗದ ಹಿಂದೆ ಪಡೆದುಕೊಳ್ಳುವೇಕೆ, ಪಡೆದುಕೊಳ್ಳುವಿಕೆ ಹಿಂದೆ ತ್ಯಾಗ, ಸ್ವಾತಂತ್ರ್ಯದ ಹಿಂದೆ ಬಂಧನಗಳು, ಬಂಧನಗಳ ಹಿಂದೆ ಸ್ವಾತಂತ್ರ್ಯ, ಹೋರಾಟ ಹಿಂದೆ ಸಮಾಧಾನ, ಸಮಾಧಾನ ಹಿಂದೆ ಹೊರಟ, ಶಕ್ತಿಯ ಹಿಂದೆ ನಿರ್ಭಲತೆ, ನಿರ್ಭಲತೆ ಹಿಂದೆ ಶಕ್ತಿ, ಭಯದ ಹಿಂದೆ ಧೈರ್ಯ, ಧೈರ್ಯದ ಹಿಂದೆ ಭಯ, ಪ್ರೀತಿಯ ಹಿಂದೆ ದ್ವೇಷ, ದ್ವೇಷದ ಹಿಂದೆ ಪ್ರೀತಿ, ನಂಬಿಕೆಯ ಹಿಂದೆ ಮೋಸ, ಮೋಸದ ಹಿಂದೆ ನಂಬಿಕೆ, ಕೊನೆಯ ಹಿಂದೆ ಆರಂಭ, ಆರಂಭ ಹಿಂದೆ ಕೊನೆ, ಕೆಲಸದ ಹಿಂದೆ ಆಲಸ್ಯ, ಆಲಸ್ಯದ ಹಿಂದೆ ಕೆಲಸ, ಬಡತನದ ಹಿಂದೆ ಶ್ರೀಮಂತಿಕೆ, ಶ್ರೀಮಂತಿಕೆ ಹಿಂದೆ ಬಡತನ, ಸ್ಥಿರತೆ ಹಿಂದೆ ಅಸ್ತಿರತೆ, ಅಸ್ತಿರತೆ ಹಿಂದೆ ಸ್ಥಿರತೆ, ನಶ್ವರತೆ ಹಿಂದೆ ಶಾಶ್ವತೆ, ಶಾಶ್ವತೆಯ ಹಿಂದೆ ನಶ್ವರತೆ, ನೈಜತೆಯ ಹಿಂದೆ ಕೃತಕತೆ, ಕೃತಕತೆಯ ಹಿಂದೆ ನೈಜತೆ, ಉದ್ದೇಶದ ಹಿಂದೆ ದುರುದ್ದೇಶ, ದುರುದ್ದೇಶ ಹಿಂದೆ ಉದ್ದೇಶ, ಬಿಡುಗಡೆ ಹಿಂದೆ ಬಂಧನ, ಬಂಧನದ ಹಿಂದೆ ಬಿಡುಗಡೆ, ಬೆಳಕಿನ ಹಿಂದೆ ಕತ್ತಲು, ಕತ್ತಲಿನ ಹಿಂದೆ ಬೆಳಕು, ಸಾಮಾನ್ಯದ ಹಿಂದೆ ಅಸಮಾನ್ಯ, ಅಸಮಾನ್ಯದ ಹಿಂದೆ ಸಾಮಾನ್ಯ, ನಿರಾಕರಣೆ ಹಿಂದೆ ಒಪ್ಪಿಗೆ, ಒಪ್ಪಿಗೆ ಹಿಂದೆ ನಿರಾಕರಣೆ, ಚಲನೆ ಹಿಂದೆ ಅಚಲತೆ, ಅಚಲತೆ ಹಿಂದೆ ಚಲನೆ, ಫಲದ ಹಿಂದೆ ಕರ್ಮ, ಕರ್ಮ ಹಿಂದೆ ಫಲ, ಆಸಕ್ತಿ ಹಿಂದೆ ನಿರಾಸಕ್ತಿ, ನಿರಾಸಕ್ತಿ ಹಿಂದೆ ಆಸಕ್ತಿ, ಸತ್ಯದ ಹಿಂದೆ ಸುಳ್ಳು, ಸುಳ್ಳಿನ ಹಿಂದೆ ಸತ್ಯ, ಈ ಭೂಮಿ ಮೇಲೆ ಎಲ್ಲವೂ ನಡಿಯುತ್ತಿರುವುದು ಒಂದು ಸರ್ಕಲ್ ಅಲ್ಲಿ ಅಂದ್ರೆ ಶೂನ್ಯದಲ್ಲಿ, ಎಲ್ಲವೂ ಕೊನೆ ಶೂನ್ಯ ಹಾಗೆ ಎಲ್ಲವುಗಳ ಆರಂಭನು ಶೂನ್ಯನೇ, ನಿಮ್ಮಲ್ಲಿ ಹುಟ್ಟೋ ಪ್ರತಿಯೊಂದು thoughts ಒಂದು ಕೊನೆ ಇದೆ ಅದರ ಹಿಂದೆಯೇ ಇನ್ನೊಂದು thoughts ಹುಟ್ಟುತ್ತದೆ, ಎಲ್ಲವೂ ಚಕ್ರದಲ್ಲೇ ಇರುತ್ತವೆ, ಒಂದು ಪ್ರತಿ ಹುಟ್ಟಿಗೆ ಅಂತ್ಯ ಇರದೆ ಇದ್ರೆ like straight line ತರ ಇದ್ರೆ ಎಲ್ಲವೂ ಹಳಿ ತಪ್ಪುತ್ತದೆ ಅಲ್ಲವೇ ಅಥವಾ ನಡೆಯುವುದಿಲ್ಲ ಅಲ್ಲವೇ. ಒಂದು ವೇಳೆ ನಡೆಯುವುದೆಲ್ಲವು ಶೂನ್ಯದ ಕಡೆಗೆ ನಡೀಲಿಲ್ಲ ಅಂದ್ರೆ ಯಾವುದೋ ಚಲಿಸುವುದಿಲ್ಲ

ಆಗುವುದೆಲ್ಲಾ ಒಳ್ಳೆದಕ್ಕೆ

ಇದು ನನ್ನ ಅಮ್ಮ ನನಗೆ ಚಿಕ್ಕವನಿದ್ದಾಗ ಹೇಳಿರೋ ಕತೆ, ನನಗೆ ಬೇಜಾರಾದಾಗೆಲ್ಲ ಈ ಕಥೆನಾ ನೆನೆಪು ಮಾಡಿಕೊಂಡು ಮೂಡ್ change ಮಾಡ್ಕೋತೀನಿ, ಒಂದು ರಾಜ್ಯ ಅಂಚಿನಲ್ಲಿ ಇರೋ ಊರ ಜನರು ರಾಜನ ಹತ್ರ ಬಂದು ತಮಗೆ ಕಾಡು ಪ್ರಾಣಿಗಳಿಂದ ತುಂಬ ತೊಂದರೆ ಆಗುತ್ತಿದೆ ಕಾಡಲ್ಲಿ ಪ್ರಾಣಿಗಳು ಜಾಸ್ತಿ ಆಗಿವೆ ಅದಕ್ಕೆ ಏನಾದ್ರೂ ಪರಿಹಾರ ಕೊಡಿ ಅಂತ ಕೇಳ್ತಾರೆ, ರಾಜನು ಮಂತ್ರಿ ಸಲಹೆ ಕೇಳುತ್ತಾನೆ, ಮಂತ್ರಿ ಯಾವಾಗಲೂ ಎಲ್ಲದಕ್ಕೂ ಒಳ್ಳೇದು ಆಗತ್ತೆ ಅಂತ ಹೇಳ್ತಾ ಇರುತ್ತಾನೆ ಈಗಲೂ ಹಾಗೆ ಹೇಳುತ್ತಾನೆ ಅದಕ್ಕೆ ರಾಜ ಮಂತ್ರಿನಾ ಉಗಿತಾನೆ ಏನು ಒಳ್ಳೇದು ಆಗತ್ತೆ ಅಂತ, ಮಂತ್ರಿ ಬೇಟೆ ಹೋಗಿ ಸ್ವಲ್ಪ ಪ್ರಾಣಿಗಳನ್ನು ಕೊಂದರೆ ಒಳ್ಳೇದು ಆಗತ್ತೆ ಅಂತಾನೆ, ಅದಕ್ಕೆ ರಾಜ ಬೇಟೆಗೆ ಹೋಗಲು ಸಿದ್ಧವಾಗುತ್ತಾನೆ. ಮರುದಿನ ಬೇಟೆಗೆ ಹೋಗಲು ತಯಾರಿ ಮಾಡುತ್ತಾರೆ ಅಂದ್ರೆ ಸೈನಿಕರು ರಾಜ ಮಂತ್ರಿ ಎಲ್ಲರೂ ಪೂಜೆ ಮಾಡಿ ಬೇಟೆಗೆ ಹೊರಡುತ್ತಾರೆ, ಸುರವಾತಿನಲ್ಲಿ ಪ್ರಾಣಿಗಳು ಸಿಗುವುದಿಲ್ಲ, ಅದಕ್ಕೆ ದಟ್ಟ ಕಾಡಿನ ಒಳಗೆ ಹೋಗತ್ತಾರೆ .ರಾಜ ಮತ್ತು ಮಂತ್ರಿ ಬೇಟೆ ಆಡು ಬರದಲ್ಲಿ ಸೈನಿಕರನ್ನೂ ಹಿಂದೆ ಬಿಟ್ಟು ಮುಂದೆ ಹೋಗುತ್ತಾರೆ. ಹಾಗೆ ಬೇಟೆಯನ್ನು ಬೆನ್ನತ್ತಿ ಹೋಗುವಾಗ ನೆಲದ ಮೇಲೆ ಇರೋ ಮರದ ಬೇರಿಗೆ ರಾಜ ಎಡೆದು ಬೀಳುತ್ತಾನೆ ಹಾಗೆ ಹೆಬ್ಬೆರಳಿಗೆ ಗಾಯ ಮಾಡಿಕೊಳ್ಳುತ್ತಾನೆ. ಇದನ್ನ ನೋಡಿ ಅವನ ಹಿಂದೆ ಮಂತ್ರಿ ಅವನ ಯಾವಾಗಲೂ ಹೇಳೋ ಆಗೋದೆಲ್ಲ ಒಳ್ಳೆಯದಕ್ಕೂ ಅಂತ ಹೇಳ್ತಾನೆ. ಮಂತ್ರಿ ಮಾತನ್ನ ಕೇಳಿ ರಾಜನಿಗೆ ಮಂತ್ರಿಯನ್ನು ಖಡ್ಗದಿಂದ ಸೀಳಿ ಹಾಕುವಷ್ಟು ಸಿಟ್ಟು ಬರತ್ತೆ ಆದ್ರೂ ತನ್ನ ಸಿಟ್ಟನ್ನು ತಡೆದು ಮಂತ್ರಿಯನ್ನು ಕೇಳುತ್ತಾನೆ ‘ನಾನು ಬಿದ್ರು ಹೇಗೆ ಒಳ್ಳೇದು ಆಗತ್ತೆ ಅಂತ ಮಂತ್ರಿಯನ್ನು ಕೇಳುತ್ತಾನೆ’ ಅದಕ್ಕೆ ಮಂತ್ರಿ ಆಗೋದೆಲ್ಲ ಒಳ್ಳೆದಕ್ಕೆ ಅಂತ ಹೇಳ್ತಾನೆ ಹೊರೆತು ರಾಜನಿಗೆ ಸರಿಯದ ಉತ್ತರ ಕೊಡುವುದಿಲ್ಲ. ರಾಜನು ಮನಸಲ್ಲೇ ಇವನಿಗೆ ಸರಿಯಾದ ಬುದ್ಧಿ ಕಲಿಸಬೇಕು ಮನಸ್ಸೊಳಗೆ ಅಂದುಕೊಳ್ಳುತ್ತಿರುತ್ತಾನೆ. ಹಾಗೆ ಸ್ವಲ್ಪ ಹೊತ್ತು ಮುಂದೆ ಸಾಗುತ್ತಿದ್ದಾಗ ರಾಜನಿಗೆ ಒಂದು ಹಾಳು ಬಾವಿ ಕಾಣಿಸತ್ತೆ. ರಾಜ ‘ ಮಂತ್ರಿಗಳೇ ನೀವು ರಾಜನ ಎಲ್ಲ ಮಾತುಗಳನ್ನು ಪಾಲಿಸುವುದು ನಿಮ್ಮ ಕರ್ತವ್ಯ ಅಲ್ಲವೇ ಅಂತ ಕೇಳುತ್ತಾನೆ ‘ ಅದಕ್ಕೆ ಮಂತ್ರಿ ಹೌದು ರಾಜರೆ ಹೇಳಿ ನಿಮ್ಮ ಆದೇಶ ಏನು ಕೇಳುತ್ತಾನೆ. ಅದಕ್ಕೆ ರಾಜ ಮುಂದೆ ಇರೋ ಹಾಳು ಬಾವಿಯಲ್ಲಿ ಬೀಳಲೂ ಹೇಳುತ್ತಾನೆ ಒಂದು ವೇಳೆ ರಾಜ ಧರ್ಮ ಪಾಲನೆ ಮಾಡದೆ ಇದ್ರೆ ನಿಮ್ಮನ್ನು ಖಡ್ಗದಿಂದ ಸೀಳುವೆ ಅಂತ ಎಚ್ಚರಿಕೆ ಕೊಡುತ್ತಾನೆ. ಅದಕ್ಕೆ ಮಂತ್ರಿ ” ಆಗೋದೆಲ್ಲ ಒಳ್ಳೇದಕ್ಕೆ” ಅಂತ ಆ ಬಾವಿಯಲ್ಲಿ ಜಿಗಿಯುತ್ತಾನೆ. ರಾಜ ಬಾವಿಯಲ್ಲಿ ಇರೋ ಮಂತ್ರಿಯನ್ನು ಕೆಣಕಿ ಆಗೋದೆಲ್ಲ ಒಳ್ಳೇದಕ್ಕೆ ಅಂತ ಹೇಳಿದೆ ಅಲ್ವಾ ಈಗ ಇಲ್ಲೆ ಬಿದ್ದು ಸಾಯಿರಿ ಅಂತ ಹೇಳಿ ಸೈನಿಕರನ್ನೂ ಹುಡುಕಲು ಹೊರಡುತ್ತಾನೆ. ಬಂದ ದಿಕ್ಕಿನ ಕಡೆ ಹೋಗುತ್ತಿರುವಾಗ ಒಮ್ಮೆಲೇ ಅವನ ಮೇಲೆ ಆಕ್ರಮಣ ಆಗತ್ತೆ ಅವನು ಯಾರು ಆಕ್ರಮಣ ಮಾಡಿದರೆ ಅನ್ನೋದನ್ನ ತಿಳಿವ ಮೊದಲೇ ಬಂದಿ ಆಗಿಬಿಡುತ್ತಾನೆ. ಅವನನ್ನು ಮನುಷ್ಯರನ್ನು ತಿನ್ನುವ ನರಭಕ್ಷಕರು ಬಂದಿಸುತ್ತಾರೆ. ರಾಜನಿಗೆ ತನ್ನ ಪರಿಸ್ಥಿತಿ ಅರಿವಾಗುತ್ತದೆ ಒಂದು ವೇಳೆ ಮಂತ್ರಿ ಇದ್ದಿದ್ದರೆ ಸ್ವಲ್ಪ ಹೊತ್ತು ಹೋರಾಟ ಮಾಡಬಹುದಿತ್ತು ಅಂತ ಆದ್ರೆ ಇಷ್ಟು ನರಭಕ್ಷಕರು ಇರುವಾಗ ಎಲ್ಲವ ವ್ಯರ್ಥ ಆಗೋದು ಅಂತ ತಿಳೀತನೆ. ನರಭಕ್ಷಕರು ಅವನನ್ನೂ ಬಲಿ ಕೊಡಲು ತಮ್ಮ ವಾಸ ಸ್ಥಾನಕ್ಕೆ ಕರೆದುಕೊಂಡು ಬರುತ್ತಾರೆ. ತಮ್ಮ ಎಲ್ಲ ಪೂಜೆಗಳನ್ನು ಪೂರ್ತಿ ಮಾಡಿ ಬಲಿಪೀಠದಲ್ಲಿ ಅವನ ತಲೆಯನ್ನು ಇಡುತ್ತಾರೆ, ಬಲಿ ಕೊಡೋ ಕುಡುಕ ತನ್ನ ಕತ್ತಿ ಎತ್ತಿ ಇನ್ನೇನು ತಲೆ ಕಡಿಬೇಕು ಅನ್ನುವಷ್ಟರಲ್ಲಿ ರಾಜನ ಹೆಬ್ಬೆರಳಿಗೆ ಆಗಿರೋ ಗಾಯ ನೋಡುತ್ತಾನೆ, ನೋಡಿ ಸಿಟ್ಟಿಲ್ಲಿ ತನ್ನ ಕತ್ತಿಯನ್ನು ಬಿಸಾಕುತ್ತಾನೆ, ರಾಜನಿಗೂ ಮತ್ತು ಅಲ್ಲಿರುವ ನರಭಕ್ಷಕರಿಗು ಇವನು ಏನು ಮಾಡುತ್ತಿರುವನು ಅನ್ನೋದೆ ಅರ್ಥ ಆಗಲ್ಲ. ಕಟುಕ ಈ ಬಲಿ ಅಪವಿತ್ರವಾಗಿದೆ ಬಲಿ ಕೊಟ್ಟರೆ ದೇವಿ ಸಿಟ್ಟಗುತ್ತಾಳೆ ಅಂತ ರಾಜನ ಹೆಬ್ಬೆರಳಿಗೆ ಆಗಿರೋ ಗಾಯ ತೋರಿಸುತ್ತಾನೆ. ಅದನ್ನ ನೋಡಿ ನರಭಕ್ಷಕರು ತಮ್ಮ ತಮ್ಮಲ್ಲೇ ಒಳ್ಳೆ ಬಲಿ ಕೈತಪ್ಪಿ ಹೋಯಿತು ಅಂತ ಬೇಜಾರು ಮಾಡಿಕೊಂಡು ರಾಜನನ್ನು ಬಿಟ್ಟು ಕಳಿಸುತ್ತಾರೆ. ರಾಜನಿಗೆ ಒಂದು ಕ್ಷಣ ರೋಮಾಂಚನವಾಗುತ್ತದೆ, ಮಂತ್ರಿ ಯಾವಾಗಲೂ ಹೇಳೋ ಮಾತು ನೆನಪಿಗೆ ಬರುತ್ತದೆ ” ಆಗುವುದೆಲ್ಲ ಒಳ್ಳೆದಕ್ಕೆ” . ರಾಜ ತನ್ನ ತಪ್ಪಿನ ಅರಿವಾಗಿ ಮಂತ್ರಿಯನ್ನು ಮೇಲೆ ಎತ್ತಲು ಬಾವಿ ಹತ್ತಿರ ಓಡೋಡಿ ಬರುತ್ತಾನೆ. ಮಂತ್ರಿಗಳೇ ನೀವು ಮಾತು ನಿಜ ಆಗೋದೆಲ್ಲ ಒಳ್ಳೆದಕ್ಕೆ ಅಂತ ರಾಜ ಹೇಳುತ್ತಾನೆ ಅದನ್ನ ಕೇಳಿದ ಮಂತ್ರಿಗೆ ರಾಜ ಮಾತು ಅರ್ಥ ಆಗುವುದಿಲ್ಲ. ರಾಜ ಮಂತ್ರಿಯನ್ನು ಮೇಲೆ ಎತ್ತಲು ಅಲ್ಲಿರೋ ಆಲದ ಮರ ಬೇರುಗಳನ್ನು ಸುರಳಿ ಮಾಡಿ ಪ್ರಯತ್ನ ಪಡುತ್ತಿರುತ್ತಾನೆ ಅಷ್ಟರಲ್ಲೇ ಸೈನಿಕರು ಇವರನ್ನು ಹುಡುಕುತ್ತ ಇವರು ಇರುವಲ್ಲಿಗೆ ಬರುತ್ತಾರೆ. ಸೈನಿಕರು ಸಹಾಯದಿಂದ ಮಂತ್ರಿಯನ್ನು ಮೇಲೆ ಎತ್ತುತ್ತಾರೆ. ರಾಜನು ನಡೆದಿರೋ ಎಲ್ಲ ಘಟನೆಗಳನ್ನು ಬಗ್ಗೆ ಮಂತ್ರಿ ಹೇಳಿ ಮಂತ್ರಿಯನ್ನು ಕಣ್ಣೀರು ಹಾಕುತ್ತಾ ಅಪ್ಪಿಕೊಳ್ಳುತ್ತಾನೆ, ನೀವು ಯಾಕೆ ಯಾವಾಗಲೂ ಆಗೋದೆಲ್ಲ ಒಳ್ಳೆದಕ್ಕೆ ಅಂತ ಹೇಳುತ್ತಿದೀರಿ ಅದರ ಮಹತ್ವ ಏನು ಇವತ್ತು ತಿಳಿಯಿತು ಅನ್ನುತ್ತಾನೆ. ಅವಾಗ ಮಂತ್ರಿಗಳು ರಾಜನ ಕಾಲಿಗೆ ಬಿದ್ದು ರಾಜರೆ ನೀವು ನನ್ನ ಬಾವಿಗೆ ತಳ್ಳಿದ್ದು ಒಳ್ಳೆದಕ್ಕೆ ಅಂತ ಹೇಳುತ್ತಾನೆ. ಅದನ್ನ ಕೇಳಿದ ರಾಜನಿಗೆ ಆಶ್ಚರ್ಯ ಆಗುತ್ತದೆ ಆಗ ಮಂತ್ರಿಗಳು ” ರಾಜರೆ ನೀವು ಒಂದು ವೇಳೆ ನನ್ನನ್ನು ಬಾವಿಗೆ ತಳ್ಳದೆ ಹೋಗಿದ್ದಿದ್ದರೆ ಆ ನರಭಕ್ಷಕರು ಈ ನಿಮ್ಮ ಮಂತ್ರಿಯನ್ನು ಬಲಿ ಕೊಟ್ಟು ಆಹಾರ ಮಾಡಿಕೊಳ್ಳುತ್ತಿದರೆ ಅಂತ ಹೇಳುತ್ತಾನೆ”, ಅದನ್ನ ಕೇಳಿದೆ ರಾಜನಿಗೆ ಮೊದಲು ಶಾಕ್ ಆಗಿ ಆಮೇಲೆ ಸರಿಯಾಗಿ ಅರ್ಥ ಆಗುತ್ತದೆ, ಅವನು ಮಂತ್ರಿಯನ್ನು ಎಬ್ಬಿಸಿ ಅಪ್ಪಿಕೊಳ್ಳುತ್ತ ” ಆಗುವುದೆಲ್ಲ ಒಳ್ಳೆದಕ್ಕೆ” ಹೇಳುತ್ತಾನೆ. ನಮ್ಮ ಜೀವನವೂ ಹೀಗೆ ಅಲ್ಲವೇ ಎಲ್ಲವೂ ಆಗೋದಕ್ಕೆ ಒಂದು ಒಳ್ಳೆ ಕಾರಣ ಇದ್ದೇ ಇರತ್ತೆ. ನಾವು ಆ ಕಾರಣ ಏನು ಅನೋದನ್ನ ತಿಳಿಯೋದನ್ನು ಕಲಿಬೇಕು

ಎಲ್ಲವೂ ಗೊಂದಲಮಯ

ಗಂಟೆ 7 ಓಹೋ ಮತ್ತೆ ಲೇಟಗಿ ಎದ್ದೆ, ಇವತ್ತು ಆಫೀಸಗೆ late ಛೆ ಈ ಹಾಳಾದು ನಿದ್ದೆಗೆ ಏನು ಮಾಡೋದು ಪ್ರತಿದಿನ ಇದೆ ಕಥೆ, ಈ ನಿದ್ದೆ ನನ್ನ ಬಿಡಲ್ವೋ ಅಥವಾ ನಾನು ನಿದ್ದೆ ಬಿಡಲ್ವೋ ಒಂದು ತಿಳಿತಾ ಇಲ್ಲ. ಹಲ್ಲುಉಜ್ಜುದು, ಸ್ನಾನ ಮಾಡೋದು,….. ಎಲ್ಲವು ಗಡಿಬಿಡಿ.ನಮ್ಮ ಜೀವನ ಶುರು ಆಗೋದಕ್ಕೂ ಮುಂಚೆನೇ ಗೊಂದಲ ಶುರು ಆಗತ್ತೆ 🤣. ಇನ್ನು ತಿಂಡಿ ತಿನ್ನೋದೋ ಬೇಡವೋ ಗೊಂದಲ, ತಿನ್ನಬೇಕು ಅಂದ್ರೆ ಏನು ತಿನ್ನೋದು ಗೊಂದಲ. ಏನೋ ಒಂದು ತಿಂದು bus stop ಗೆ ಓಡಬೇಕು ಬರೋ bus ತುಂಬಾ ರಶ್ ಇದೆ ಹತ್ತೋದು ಬೇಡವಾ ಅನ್ನೋ ಗೊಂದಲ, ಹತ್ತದೆ ಬಿಟ್ಟಿದ್ದಕ್ಕೆ ಮುಂದೆ ಬರೋ bus ಇನ್ನು ರಶ, ನಮಗಿಂತ ಮುಂಚೆ ಬಂದಿರೊ ಮ್ಯಾನೇಜರ್ ನೋಡಿದ್ರೆ ಒಂದ ತರ ಗೊಂದಲ, ಛೆ ಯಾವನಿಗೆ ಬೇಕು ಈ ಜೀವನ ಅನ್ನಿಸುತ್ತೆ??. ನಾವು ಎಲ್ಲಿಗೆ ಒಡತಾ ಇದೀವಿ ಒಂದು ಸಲೀನಾದ್ರು ತುಂಬಾ ಆಳವಾಗಿ ಯೋಚನೆ ಮಾಡತೀವ?, ಒಂದು ವೇಳೆ ಮಾಡಿದ್ರೂ ಒಂದು end result ಬರತಿವಾ?? ಇದ್ರಲ್ಲೂ ಗೊಂದಲ ಇದೆ ನಮಗೆ, ಒಂದು quote ಇದೆ ” confusion is happiness ” ಇದನ್ನ ಹೇಗೆ ಅರ್ಥ ಮಾಡಿಕೊಳ್ಳಬೇಕು ಅಂತ ಇನ್ನುವರೆಗೂ ಗೊತ್ತಾಗತ ಇಲ್ಲ ನಂಗೆ. Almost ಈ ಭೂಮಿ ಮೇಲೆ ಇರೋ ಜನರಲ್ಲಿ 90% ಜನರ ಹೀಗೆ ಇರಬಹುದು. ನಾವು ಎಲ್ಲರ ಒಂದರ ಹಿಂದೆ ಒಡತಾ ಇದೀವಿ ಅದು ಹಣ ಆಗಿರಬಹುದು, ಆಸ್ತಿ, ಅಂತಸ್ತು, ವ್ಯಕ್ತಿ, ಆಗಿರಬಹುದು ಆದ್ರೆ majority ಜನ ಹಣದ ಹಿಂದೆನೇ ಒಡತಾ ಇದೀವಿ ಆದ್ರೂ ನಮಗೆ ನಾವೇ & ಸುತ್ತಲೂ ಇರೋರಿಗೂ ಸುಳ್ಳು ಹೇಳತೀವಿ ನಾನು ಹಣದ ಹಿಂದೆ ಒಡತಾ ಇಲ್ಲ ಅಂತ. ಮಿಕ್ಕಿರೋ 10% ಜನರು ಹಣದ ಹಿಂದೆನೇ ಒಡತಾ ಇದಾರೆ ಆದ್ರೆ ತುಂಬಾ ಫಾಸ್ಟ್ ಆಗಿ ಹಾಗೆ ತುಂಬಾ ಶಿಸ್ತಿನ ಜೀವನ ಜೊತೆಗೆ ಹೋಗತಾ ಇದಾರೆ ಅಷ್ಟೇ. ಹಣದ ಹಿಂದೆ ಓಡೋದು ತಪ್ಪಾ ಹಾಗಾದ್ರೆ?? ಇದಕ್ಕೆ ನನ್ನ ಬಳಿ ಸರಿಯಾದ ಉತ್ತರ ಇಲ್ಲ ಯಾಕಂದ್ರೆ ನಾನು ಹಣದ ಹಿಂದೆ ಒಡತಾ ಇರೋನು ಆದ್ರೆ ನಾನು ಸ್ವಲ್ಪ slow ಆಗಿ ಒಡತಾ ಇದೀನಿ ಅಷ್ಟೇ 😜🤣. ಒಂದು ವೇಳೆ ನಮಗೆ ಬೇಕಾದಷ್ಟು ಹಣ ಸಿಕ್ಕರೂ ನಾವು ಇನ್ನು ಹೆಚ್ಚು ಗೊಂದಲಗೊಳ್ಳುತ್ತವೆ ಅಲ್ವಾ, ಮುಂದೆ ಏನು ಮಾಡೋದು ಅಂತ. ಹಾಗಾದ್ರೆ ನಾವು ಹುಡಕಾತಾ ಇರೊದು ಬೇರೆ ಏನೋ ಇದೆ?? ಏನದು?? ಸಂತೃಪ್ತಿ ಅಥವಾ ನಿರಾಳ. ಸಂತೃಪ್ತಿ ಸಿಗೋದು ಎಲ್ಲಿ?? ನಿರಾಳತೆ ಸಿಗೋದು ಎಲ್ಲಿ??, ಒಂದು ಸಲಿ ಸರಿಯಾಗಿ ಗಮನಿಸಿ ನಾವು ಶಿನೋವಾಗ ನಮ್ಮ ಹೃದಯ ಒಂದು ಕ್ಷಣ stop ಆಗತ್ತೆ ಅಂತೇ ಅವಾಗ ಇನ್ನೋದನ್ನ ಗಮನಿಸಿ ಶಿನು ಎಷ್ಟು ಹಿತ ಅನ್ನಿಸತ್ತೆ ಅಲ್ವಾ ಇದೆಲ್ಲ ನನ್ನ ಅನುಭವ ನಿಮಗ್ ಇದೆ ತರ ಅನ್ನಿಸತ್ತೆ ಇಲ್ವೋ ಗೊತ್ತಿಲ್ಲ, ಆದ್ರೆ ನಾನು ಯಾಕೆ ಈ ಉದಾಹರಣೆ ಕೊಟ್ಟೆ ಅಂದ್ರೆ ನಾವು ಈ ಕ್ಷಣ ಬದುಕಿದ್ರೆ ನಮ್ಮ ಜೀವನ ಎಷ್ಟು ಹಿತವಾಗಿ ಇರತ್ತೆ ಅಲ್ವಾ,ಆದ್ರೆ ನಾವು ಮಾಡ್ತಾ ಇರೋದು ಏನು ನಮ್ಮ ವರ್ಷ, ತಿಂಗಳು, ದಿನ, ಗಂಟೆ, ನಿಮಿಷ, ಹೋಗಲಿ ದೇಹ ಕೂಡ ಇಲ್ಲೇ ಇರತ್ತೆ ಆದ್ರೆ ಇದನ್ನ ಆಳೋ ರಾಜ ಅಂದ್ರೆ ಮನಸ್ಸು ಮಾತ್ರ ರಾಜ್ಯದಲ್ಲಿ (ದೇಹದಲ್ಲಿ ) ಇಲ್ಲದೆ ಎಲ್ಲೋ ಹಿಂದೇ (ಭೂತ ) ಅಥವಾ ಮುಂದೆ ( ಭವಿಷ್ಯದಲ್ಲಿ ) ಯುದ್ಧ ಮಾಡಕ್ಕೆ ಹೋಗತತ ಇರತ್ತೆ. ಅದಕ್ಕೆ ಎಲ್ಲವು ಗೊಂದಲ ನಮ್ಮ ಜೀವನದಲ್ಲಿ, ನಾವು ಹೇಗೆ ಬದುಕತಾ ಇದೀವಿ ಅಂದ್ರೆ ಈ ಕೋಳಿ ತಿಪ್ಪೆ ಕೇದರತ್ತೆ ಅಲ್ವಾ ಆ ತರ ನಾವು ನಿನ್ನೆಯಲಿ ಏನಿದೆ ನಾಳೆ ಏನಾಗತ್ತೆ ಅಂತ ಕೇದಾರತ ಇವತ್ತನ್ನ ಮುಂದೆ ತಿಪ್ಪೆ ಮಾಡ್ತಾ ಬದುಕತಾ ಇದೀವಿ ಅಲ್ವಾ, ಎಂತ ವಿಚಿತ್ರ ನೋಡಿ ನಮ್ಮ ಕೈಲಿ ಇವತ್ತೇ ಒಂದೇ ಇರೋದು ಆದ್ರೆ ನಾವು ಇವತ್ತ ಒಂದು ದಿನಾನು ಸರಿಯಾಗಿ ಬದುಕಲ್ಲ. ಯಾವಾಗಲು ನಮ್ಮ ಮನಸ್ಸು ಏನನ್ನಾದ್ರೂ ಹುಡುಕಲೇಬೇಕಾ ಹಾಗೆ ಒಂದು ಕ್ಷಣ ಸುಮ್ಮನೆ ಇರೋದಕ್ಕೆ ಬರೋದೇ ಇಲ್ವಾ ನಮಗೆ. ಇವಾಗ ಈ ಪೋಸ್ಟ್ ಬರಿಯೋದಕ್ಕೆ ಮುಂಚೆ ನಾನು ಎಷ್ಟೊಂದು problem ಬಗ್ಗೆ ಯೋಚಿಸಿ ಯೋಚಿಸಿ ನನ್ನ ತಲೇನ ತಿಪ್ಪೆ ಮಾಡಿದ್ದೆ ಆದ್ರೆ ಇವಾಗ ಎಷ್ಟೊಂದು ನಿರಾಳತೆ ಗೊತ್ತ ಯಪ್ಪಾ ಒಂದು ಸ್ವರ್ಗ ಅದು. ಇನ್ನೊಂದು ಏನು ಗೊತ್ತ ನಾವು ನಮ್ಮ ಬಗ್ಗೆ (ತನ್ನ ) ಬಗ್ಗೆ ಜಾಸ್ತಿ ಯೋಚಿಸಿದಷ್ಟು ಈ ಜೀವನ ಹಿಂದೆ ಮುಂದೆ ಆಗತ್ತೆ ಅದೇ ನಾವು ನಮ್ಮ ಸುತ್ತಿಲಿನ ಜನರು ಅಥವಾ ಸಮಾಜದ ಸುಧಾರಣೆ ಬಗ್ಗೆ ಯೋಚಿಸಿದ್ರೆ ನಮ್ಮ ಮನಸ್ಸಿಗೆ ಏನಾದ್ರು ಮಾಡಬೇಕು ಅನ್ನೋ ಹುಮ್ಮಸು ಧ್ಯರ್ಯ ಬರತ್ತೆ ಅಲ್ಲ ಇದು ನನ್ನ ಅನುಭವ ಅಷ್ಟೇ. ಈ ಪ್ರಕೃತಿಯಲ್ಲಿ ಇರೋ ಎಲ್ಲ ಚರಚರ ಜೀವಿಗಳನ್ನ ನೋಡಿ ( ಮನುಷ್ಯ ಒಬ್ಬನ್ನ ಬಿಟ್ಟು )ಅವು ಅವುಗಳಿಗೆ ಗೊತ್ತಿಲ್ಲದೇ ಈ ಪ್ರಕೃತಿ ಉಪಯೋಗ ಆಗೊತರ ಬದುಕತಾ ಇವೆ, ಮನುಷ್ಯ ಮಾತ್ರ ಎಲ್ಲಾನು damage ಆಗೋ ತರ ಬದುಕುತ್ತಾನೇ ಅದು ಎಲ್ಲವನ್ನು ತಿಳಿದವನ ಕತೆ ಇದು. ಒಂದು ಸಣ್ಣ ಉದಾಹರಣೆ ಕೊಡತೀನಿ ನೀವು ಒಂದು ಸಲಿ try ಮಾಡಿ ಬಸ್ಸಲ್ಲಿ ಒಂದು ಸಲಿ ಯಾರಿಗದ್ರು ನಿಮ್ಮ ಶೀಟ್ ಬಿಟ್ಟು ಕೊಡಿ, ಅವಾಗ ಆಗೋ ನಿರಾಳತೆ, ಸಂತೃಪ್ತಿ ನೀವು ಕೋಟಿ ದುಡ್ಡು ಕೊಟ್ಟರು ಸಿಗಲ್ಲರೀ, ನಿಮ್ಮ ಮನಸಲ್ಲಿ ಮತ್ತೆ ಮತ್ತೆ ಏಳೋ ಗೊಂದಲಕ್ಕೆ ಇದೆ ಪರಿಹಾರ ಅನ್ನಿಸತ್ತೆ ಇನ್ನೊಬ್ಬರಗೆ ಒಳ್ಳೇದು ಮಾಡೋದು, ನಾವು ಪ್ರತಿದಿನ ಮುಗಿದಾಗ ಇನ್ನೊಂದು ಒಳ್ಳೆ ದಿನದ ಕಡೆಗೆ ಅಲ್ವಾ ಮತ್ತೆ ಯಾಕೆ ಈ ಗೊಂದಲ, ಚಿಂತೆ ಕಿತ್ತಾಟಗಳು, ಪ್ರತಿಕ್ಷಣದಲ್ಲೇ ಬದುಕಿ ಅದೇ ನಿಜವಾದ ಜೀವನ ನೀವು ಹಿಂದೇ ಮುಂದೆ ಬದುಕಿದರೆ ಎಲ್ಲಾನು ತಿಪ್ಪೆ ಆಗತ್ತೆ ಉಷಾರು 🤪😜🤣

ನಾನು ಯಾಕೆ ಈ blog ಬರೀತಾ ಇದೀನಿ

ನಿಜ್ವಾಗ್ಲೂ ಗೊತ್ತಿಲ್ಲರಿ, ಯಾಕಂದ್ರೆ ನನ್ನ ತಲೆಲಿ ಒಡತಾ ಇರೋ ಎಷ್ಟೊಂದು ಯೋಚನೆಗಳು, ಚಿಂತನೆಗಳಿಗೆ ಇನ್ನೊಬ್ಬರ ಮನದಲ್ಲಿ ಜೀವವಾಗಿ ಹುಟ್ಟಬಹುದು ಅಥವಾ ಇನ್ನೊಬ್ಬರ ಮನವನ್ನು ಗೊಂದಲಕ್ಕೆ ನುಕಬಹುದು, ಇಲ್ಲ ಇನ್ನೊಬ್ಬರ ಬದುಕನ್ನ ಬದಲಾಯಿಸಬಹುದು ಅಥವಾ ನನ್ನ ಜೀವನ ಬದಲಾಯಿಸಬಹುದು, ಆದ್ರೆ ಈ blog ನಾ ಓದಬೇಕು ಅಂತ ಏನು ಆಶೆ ಇಲ್ಲ, ಇದನ್ನ ಬಾರಿಸ್ತಾ ಇರೋನು ಅವನು ನಾನು ಮಾಧ್ಯಮ ಮಾತ್ರ ಇಲ್ಲ, ನಾವು ಅವಾಗ ಅವಾಗ ನಮಗೆ ಖುಷಿಯಾಗೋ ಹಾಗೂ ಭಯಪಡೋ ಕೆಲಸಗಳನ್ನ ಮಾಡಬೇಕಂತೆ ಆವಾಗ್ಲೇ ಈ ಜೀವನದಲ್ಲಿ ಏನು miss ಮಾಡ್ಕೋತ ಇದೀವಿ ಅನ್ನೋದು ಗೊತ್ತಾಗತ್ತೆ. ಈ ಸಮಾಜ ಅಥವಾ ನಮ್ಮ ಸುತ್ತಿಲಿನ ಜನ ನಮ್ಮನ್ನು ಎಷ್ಟು ಚನ್ನಾಗಿ tune ಮಾಡತಾ ಇದಾರೆ ಅಂದ್ರೆ ನಾವು ಪ್ರತಿಕ್ಷಣ ಭಯ ಅಥವಾ ಗೊಂದಲದಲ್ಲಿ ಬದುಕುಬೇಕು ಯಾಕಂದ್ರೆ ಅವರನ್ನು ಹಾಗೆ ಹಿಂದೆ ಹೋಗಿರೋರು tune ಮಾಡಿದ್ರೂ, ನಾವು ಅವರ ಹಾಗೆ ಬದುಕಿದ್ರೆ ಮುಂದೆ ಬರೋರನ್ನ tune ಮಾಡತೀವಿ 😜🤣. ಯಾರು ಏನು ಅಂದುಕೊಳ್ಳುವರು, ಅದನ್ನ ಮಾಡಬೇಡ loss ಆಗತಿಯ, ಇದನ್ನ ಮಾಡು ಲಾಭ ಆಗತ್ತೆ ಎಲ್ಲದಕ್ಕೂ suggestion ಕೊಟ್ಟೆ ಕೊಡತಾರೆ, ಸೂರ್ಯ ಚಂದ್ರ ಪ್ರಕೃತಿ, ಗಾಳಿ, ನದಿ ಇವುಗಳನ್ನು ನೋಡಿ ಅವು ಎಲ್ಲವೂ ತಮಗೆ ಹೇಗೆಬೇಕು ಹಾಗೆ ನಡೀತವೆ ಅಂದ್ರೆ ನ್ಯಾಚುರಲ್ ಆಗಿ, may be ಅವುಗಳಿಗೆ ವಿಚಾರ ಮಾಡೋ ಶಕ್ತಿ ಇಲ್ಲ ಅದಕ್ಕೆ ನ್ಯಾಚುರಲ್ ಆಗಿವೆ ವಿಚಾರ ಮಾಡೋ ಶಕ್ತಿ ಇದ್ದದ್ರೆ ಅವು ನಮ್ಮ ಹಾಗೆ ಎಲ್ಲರನ್ನ ಮೆಚ್ಚಿಸೋಕ್ಕೆ ಬದುಕತಾ ಇರುತಿದ್ದವು. ಹೋಗಲಿ ನಾವು ಎಷ್ಟೆಲ್ಲ ಮಾಡತೀವಿ ಅಂದ್ರೆ ದುಡ್ಡು ಹೆಸರು, ಆಸ್ತಿ ಅಂತಸ್ತು ಆದ್ರೆ ಕೊನೆಗೆ ಉಳಿಯೋದು ಏನು ಮತ್ತೆ ಆಶೆಗಳೇ ಅಲ್ವಾ, ನಾವು ರಾಮ, ಬುದ್ಧ, ಬಸವಣ್ಣ, ಗಾಂಧಿ, ಭಗತ, ಸುಭಾಷ, ಕಲಾಂ, ರತನ ಟಾಟಾ, ಇವರಲ್ಲ ನಮ್ಮ ಮನಸಲ್ಲಿ ಇರೊದು ಅವರು ಕಳಿಸಿರೋ ಆಸ್ತಿ ಅಂತಸ್ತ ಇಂದ ಅಲ್ಲ ಅವರ ಗುಣಗಳು ಹಾಗೂ ಆ ಗುಣಗಳಿಂದ ಈ ಸಮಾಜಕ್ಕೆ ಮಾಡಿರೋ ಉಪಕಾರಗಳಿಂದ ಅಲ್ವಾ, ನಿಮ್ಮ ಮನಸಲ್ಲಿ ಹಾಗೆ ಒಂದು test ಮಾಡಿ ನೀವು ನಿಮ್ಮ ಫ್ಯಾಮಿಲಿ ಅಥವಾ ನಿಮಗೆಗೋಸ್ಕರ ಏನಾದ್ರು ಮಾಡಿಕೊಳ್ಳಬೇಕು ಅಂತ ಯೋಚನೆ ಮಾಡಿ ಅವಾಗ ನಿಮ್ಮ ಮನಸಲ್ಲಿ ಚಿಕ್ಕ ಭಯ ಅಥವಾ ದುಗುಡ ಹುಟ್ಟತ್ತೆ, ಅದೇ ನೀವು ಈ ಸಮಾಜದಲ್ಲಿ ಏನಾದ್ರು ಒಂದು ಬದಲಾವಣೆ ತರಬೇಕು ಅಥವಾ ಈ ಸಮಾಜಕ್ಕೇ ಒಳ್ಳೇದು ಮಾಡಬೇಕು ಅಂತ ಯೋಚನೆ ಮಾಡಿ ನಿಮ್ಮಲ್ಲಿ ಒಂದು ರೀತಿಯ ಹುಮ್ಮಸ್ಸು ಹುಟ್ಟಿಕೊಳ್ಳತ್ತೆ ಅಲ್ವಾ ಅದು ನನಗೆ ಆಗತಾ ಇರೋ ಅನುಭವ ಆದ್ರೆ ಎಲ್ಲರಿಗೂ ಆಗತ್ತೆ ಅನ್ನೋದು ನಂಗೆ ಗೊತ್ತಿಲ್ಲ. ಈ ಮನುಷ್ಯ ಸಂಘಜೀವಿ ಅಂದ್ರೆ ನಾವು ಯಾವಾಗ್ಲೂ ಸಮಾಜದಲ್ಲಿ ಬುದುಕೋದನ್ನ ಇಷ್ಟಪಡುತ್ತೇವೆ ಎಲ್ಲರ ಜೊತೆಗೆ ಮಾತನಾಡುತ್ತ, ಎಲ್ಲರ ಜೊತೆಗೆ ಖುಷಿ ಖುಷಿಯಾಗಿ ಹೊಂದಾಣಿಕೆ ಮಾಡಿಕೊಂಡ ಬದುಕ್ಕುತ್ತ ಬಂದಿದೀವಿ ಹಾಗೆ ಮುಂದೆ ಬದುಕಿತೀವಿ ಅನ್ನೋದು ಸತ್ಯ. ನಾವು ಸಾಯೋವಾಗ ನಮಗೆ ನಮ್ಮನ ತುಂಬಾ ಕಾಡೋದು ನೆನಪುಗಳು ಮಾತ್ರ ಅಂತೇ ಅಂದ್ರೆ ನಾವು ಹೇಗೆ ಬದುಕಿವಿ ಅನ್ನೋ ನೆನಪು ನಮಗೆ ಅತಿ ದೊಡ್ಡ ಆಸ್ತಿ. ಇರೊದು ಒಂದು ಜೀವನ ಎಲ್ಲರನ್ನು ಪ್ರೀತಿಸುತ್ತ ಎಲ್ಲರ ಜೊತೆಗೆ ಖುಷಿ ಖುಷಿಯಾಗಿ ಬದುಕೋಣ 🥰☺️☺️